ಗಜೇಂದ್ರಗಡ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕೃಷಿ ಇಲಾಖೆಯ ಮಾರಾಟ ಮಳಿಗೆಯಲ್ಲಿ ಸೋಮವಾರದಿಂದ ವಿತರಣೆ ಮಾಡುತ್ತಿರುವ ಬಿಜಿಎಸ್ 9 ತಳಿಯ (ಬೀಜರಾಜ) ಹೆಸರು ಬೀಜಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ರೈತ ಸಂಪರ್ಕ ಕೇಂದ್ರದ ಮೂಲಕ ಬೀಜದ ಕಂಪನಿಯವರು ರೈತರಿಗೆ ಮೋಸ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದರು.

ಮಾರಾಟ ಮಳಿಗೆಯಲ್ಲಿ 22.28 ಕ್ವಿಂಟಲ್ ಹೆಸರು ಬೀಜದ ದಾಸ್ತಾನಿದ್ದು, 5 ಕೆ.ಜಿ ಹೆಸರು ಬೀಜದ ಪ್ಯಾಕೇಟ್ಗೆ ₹635 ಇದ್ದು, ಸಾಮಾನ್ಯ ರೈತರಿಗೆ ₹510 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹447.50 ರಿಯಾಯಿತಿ ದರದಲ್ಲಿ ಸೋಮವಾರದಿಂದ ವಿತರಿಸಲಾಗುತ್ತಿದೆ. ಬೆಳಗಿನಿಂದ ಮಧ್ಯಾಹ್ನದವರೆಗೆ ವಿವಿಧ ಗ್ರಾಮಗಳ ರೈತರಿಗೆ 3.60 ಕ್ವಿಂಟಲ್ ಹೆಸರು ಬೀಜ ವಿತರಣೆ ಮಾಡಲಾಗಿದೆ. ಮಧ್ಯಾಹ್ನ ರಾಮಾಪುರ ಗ್ರಾಮದ ರೈತರೊಬ್ಬರು ಹೆಸರು ಬೀಜದ ಪ್ಯಾಕೇಟ್ ತೆಗೆದು ಬೀಜ ಪರಿಶೀಲಿಸಿದಾಗ ಬೀಜಗಳು ಸಣ್ಣ, ದೊಡ್ಡ ಗಾತ್ರದ, ಮಸುಕಾದ ಹಾಗೂ ಹಾಳಾಗಿರುವುದು ಕಂಡು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ವರ್ಷ ಅಧಿಕ ಮಳೆಯಿಂದ ಹೆಸರು ಬೆಳೆ ಹಾಳಾಗಿತ್ತು. ಈ ಬಾರಿ ಮಳೆ ಪ್ರಮಾಣ ಕಡಿಮೆಯಿರುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಖರ್ಚಿನ ಹೆಸರು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ ಬೀಜ ಕಪ್ಪಾಗಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

‘ಕಂಪನಿಯ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿನ ಬೀಜಗಳು ಉತ್ತಮ ಗುಣಮಟ್ಟದಲ್ಲಿರುತ್ತವೆ. ಉತ್ತಮ ಇಳುವರಿ ಬರುತ್ತವೆಂಬ ನಂಬಿಕೆಯಿಂದ ರೈತರು ಬಿತ್ತನೆ ಬೀಜ ಖರೀದಿಸುತ್ತಾರೆ. ಆದರೆ ಬಿಜಿಎಸ್ ತಳಿಯ ಬೀಜರಾಜ ಹೆಸರು ಬೀಜಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ. ಇಂತಹ ಬೀಜ ವಿತರಣೆ ಮಾಡಿದ ಕಂಪನಿ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಶಿಗೇರಿ ಗ್ರಾಮದ ಶೇಷಪ್ಪ ಚುರ್ಚಪ್ಪನವರ, ಕಲ್ಲಿಗನೂರ ಗ್ರಾಮದ ಮುತ್ತಣ್ಣ ಅಕ್ಕರಗಲ್ಲ ಆಗ್ರಹಿಸಿದರು.

‘ರೈತರಿಂದ ಖರೀದಿಸಿರುವ ಹೆಸರು ಕಾಳುಗಳು ಮಶಿನ್ನಿಂದ ಕಟಾವು ಮಾಡಿರುವುದರಿಂದ ಕಾಳುಗಳು ಕಪ್ಪಾಗಿವೆ. ರೈತರಿಂದ ಖರೀದಿಸಿದ ಹೆಸರು ಕಾಳುಗಳನ್ನು ಹಲವು ಪ್ರಕ್ರಿಯೆಗಳ ಮೂಲಕ ಬೀಜಗಳನ್ನು ಸಿದ್ಧಪಡಿಸಲಾಗಿರುತ್ತದೆ. ಅಲ್ಲದೆ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿರುತ್ತದೆ. ಬೀಜಗಳು ಮೊಳಕೆಯೊಡೆಯಲು ಯಾವುದೇ ತೊಂದರೆಯಾಗುವುದಿಲ್ಲ. ಈ ಬೀಜಗಳು ಬೇಡವೆಂದರೆ ಅವುಗಳನ್ನು ಮರಳಿ ಪಡೆಯುತ್ತೇವೆ’ ಎಂದು ಕರ್ನಾಕಟ ಬೀಜ ನಿಗಮದ ವ್ಯವಸ್ಥಾಪಕ ಪ್ರಮೋದ ಕುಲಕರ್ಣಿ ಮಾಹಿತಿ ನೀಡಿದರು.

‘ಬೀಜೋತ್ಪಾದನೆ ಕಂಪನಿಯವರು ರೈತರು ರಾಶಿ ಮಾಡಿದ ಕಾಳುಗಳನ್ನು ಮುಂದಿನ ವರ್ಷದ ಬಿತ್ತನೆ ಸಮಯದವರೆಗೆ ಬೀಜ ಹಾಳಾಗದಂತೆ ಪೌಡರ್ ಹಾಕಿ ಸಂರಕ್ಷಣೆ ಮಾಡಿರುತ್ತಾರೆ. ರೈತರು ಬಿತ್ತನೆ ಮಾಡುವಾಗ ಪ್ರತಿ ಕೆ.ಜಿ ಬೀಜಕ್ಕೆ 3 ಗ್ರಾಂ ಜೈರಾಮ್ ಅಥವಾ ತೈರಾಮ್ ರಸಾಯನದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಬೆಳೆಗಳಲ್ಲಿ ರೋಗಬಾಧೆ ಹತೋಟೆಗೆ ತರಬಹುದಾಗಿದೆ’ ಎಂದು ಗಜೇಂದ್ರಗಡ ಕೃಷಿ ಅಧಿಕಾರಿ ಸಿ.ಕೆ.ಕಮ್ಮಾರ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-23-1863696203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.