ಗಜೇಂದ್ರಗಡ: ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಬಸವಾದಿ ಶರಣರ ಹೆಸರು ಬಳಸಿಕೊಳ್ಳದಂತೆ, ಅವರ ವಚನಗಳನ್ನು ತಿರುಚಿ ತಪ್ಪಾಗಿ ಹೇಳದಂತೆ ಹಾಗೂ ಸಂವಿಧಾನ ವಿರೋಧಿ, ಸನಾತನವಾದಿ ಕನೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

‘ಹಿಂದುತ್ವವಾದಿ ಶಕ್ತಿಗಳು ಶರಣ ಚಳುವಳಿಯ ಆಶಯಗಳ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಇದರ ಹಿಂದೆ ಆರ್ಎಸ್ಎಸ್, ಬಿಜೆಪಿ ಪ್ರಮುಖರಿದ್ದು, ರಾಜಕೀಯ ಅಡಗಿದೆ. ಇದಕ್ಕೆ ನಮ್ಮ ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ’ ಎಂದು ಜೆಎಲ್ಎಂ ಮುಖಂಡರು ಪ್ರತಿರೋಧ ವ್ಯಕ್ತಪಡಿಸಿದರು.

ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ಮನವಿ ಸ್ವೀಕರಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಗುರುಲಿಂಗಯ್ಯ ಓದಸುಮಠ, ಕೆ.ಎಸ್.ಸಾಲಿಮಠ, ಬಸವರಾಜ ಕೊಟಗಿ, ಎಂ.ಎಸ್.ಹಡಪದ, ಬಸವರಾಜ ಚೋಳಿನ, ಎಂ.ಬಿ.ಸೋಂಪುರ, ಸುರೇಶ ಚೋಳಿನ, ರವಿ ಗಡೇದವರ, ಬಾಲು ರಾಠೋಡ, ಬಸವರಾಜ ಹೊಸಮನಿ, ಪೀರು ರಾಠೋಡ, ಚನ್ನಪ್ಪ ಗುಗಲೋತ್ತರ, ಮಹಾಂತೇಶ ಅಂಗಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-1823821255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.