ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು

Published : 2 ಸೆಪ್ಟೆಂಬರ್ 2024, 23:30 IST
Last Updated : 2 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಗಜೇಂದ್ರಗಡ: ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಗೆ ಮಂಗಳವಾರ ಚುನಾವಣೆ ನಡೆಯಲಿದೆ.

ಪಟ್ಟಣದ ಪುರಸಭೆ 23 ಸದಸ್ಯ ಬಲದ ಪೈಕಿ 18 ಬಿಜೆಪಿ ಹಾಗೂ 5 ಕಾಂಗ್ರೆಸ್‌ ಸದಸ್ಯರಿದ್ದಾರೆ. ಪುರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ಮೊದಲ ಅವಧಿಯಲ್ಲಿ 23ನೇ ವಾರ್ಡ್‌ನ ಸದಸ್ಯ ವೀರಪ್ಪ ಪಟ್ಟಣಶೇಟ್ಟಿ ಅಧ್ಯಕ್ಷರಾಗಿ, 7ನೇ ವಾರ್ಡ್‌ನ ಸದಸ್ಯೆ ಲೀಲಾವತಿ ವನ್ನಾಲ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸಿದ್ದಾರೆ.

ಸದ್ಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ 2ನೇ ವಾರ್ಡ್‌ನ ಸದಸ್ಯ ಯಮನಪ್ಪ ತಿರಕೋಜಿ, 19ನೇ ವಾರ್ಡ್‌ನ ಸದಸ್ಯ ಸುಭಾಸ ಮ್ಯಾಗೇರಿ, 18ನೇ ವಾರ್ಡ್‌ನ ಸದಸ್ಯ ಮುದಿಯಪ್ಪ ಮುಧೋಳ, 14ನೇ ವಾರ್ಡ್‌ನ ಸದಸ್ಯೆ ಉಮಾ ಮ್ಯಾಕಲ್‌, 8ನೇ ವಾರ್ಡ್‌ನ ಸದಸ್ಯೆ ದಾಕ್ಷಾಯಣಿ ಚೋಳಿನ ಆಕಾಂಕ್ಷಿಗಳಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ 4ನೇ ವಾರ್ಡ್‌ನಸದಸ್ಯೆ ಸುಜಾತಾಬಾಯಿ ಶಿಂಗ್ರಿ, 9ನೇ ವಾರ್ಡ್‌ನ ಸದಸ್ಯೆ ಕೌಸರಬಾನು ಹುನಗುಂದ, 22ನೇ ವಾರ್ಡ್‌ನ ಸದಸ್ಯೆ ಲಕ್ಷ್ಮೀ ಮುಧೋಳ, 16ನೇ ವಾರ್ಡ್‌ನ ಸದಸ್ಯೆ ಲೀಲಾವತಿ ಸವಣೂರ ಆಕಾಂಕ್ಷಿಗಳಾಗಿದ್ದಾರೆ. ಆದರೆ ಅಂತಿಮವಾಗಿ ಅಧ್ಯಕ್ಷ, ಉಪಾಧ್ಯಕ್ಷೆ ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧಾಿಸಲಿದೆ ಎಂದು ಆಕಾಂಕ್ಷಿಗಳು ಹೇಳುತ್ತಿದ್ದಾರೆ.

ಪುರಸಭೆಯಲ್ಲಿ ಐದು ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ ಕೆಲ ದಿನಗಳ ಹಿಂದೆ ಬಿಜೆಪಿ ಸದಸ್ಯರಿಗೆ ಗಾಳ ಹಾಕಿ ಅಧಿಕಾರಕ್ಕೆರಲು ತೆರೆಮರೆಯಲ್ಲಿ ಕಸರತ್ತು ನಡೆಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ಮಾತುಗಳೂ ಕೇಳಿ ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT