ಗಜೇಂದ್ರಗಡ: ಸಮೀಪದ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲವೆಂದು ಆರೋಪಿಸಿ ದಲಿತ ಬಹುಜನ ಚಳವಳಿ ಸಂಘಟನೆ ವತಿಯಿಂದ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

‘ನರೇಗಾ ಯೋಜನೆಯಡಿ ಕೆಲಸ ನೀಡದ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಕರೆಯನ್ನೂ ಸ್ವೀಕರಿಸುವುದಿಲ್ಲ. ಕೆಲಸಕ್ಕೆ ಹೋಗದಿದ್ದರೂ ಜಾಬ್ ಕಾರ್ಡ್ ಇರುವವರ ಖಾತೆಗೆ ಕೂಲಿ ಹಣ ಪಾವತಿಸಿದ್ದಾರೆ. ಈ ವರ್ಷವಾದರೂ ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಕಚೇರಿ ಮುಂದೆ ಒಲೆ ಹೂಡಿ, ಅಡುಗೆ ಮಾಡಿ ಊಟ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಸ್ಥಳಕ್ಕೆ ಆಗಮಿಸಿ ಪ್ರತಿಭನಕಾರರ ಮನವಿ ಆಲಿಸಿ, ಕೆಲಸ ನೀಡುವ ಭರವಸೆ ನೀಡಿದರು.

ರವಿ ಗುಳೇದಗುಡ್ಡ, ರಾಮಣ್ಣ ಕೋಳೂರ, ಸಣ್ಣಪ್ಪ ಗುಳೇದಗುಡ್ಡ, ಬಸವರಾಜ ಶಿರೋಳ, ಹನಮಂತಪ್ಪ ಭಜಂತ್ರಿ, ಶಂಕ್ರಪ್ಪ ಭಜಂತ್ರಿ, ಬಸವರಾಜ ಕಂಬಳಿ, ಶ್ರೀಶೈಲಪ್ಪ ಕುಬಸದ, ಬಸಪ್ಪ ಹಂಡಿ, ಪಂಚಾಕ್ಷರಿ ಭಜಂತ್ರಿ, ಶ್ರೀಕಾಂತ ಮಾರನಬಸರಿ, ಬಸವರಾಜ ಬಾರಕೇರ, ವೀರೇಶ ಭಜಂತ್ರಿ, ವೀರಣ್ಣ ನರಗುಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-23-847420551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.