ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದಲ್ಲಿ ಶುಕ್ರವಾರ ಬೀರಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಬೀರಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಗುರುವಾರ ವಿವಿಧ ಊರುಗಳಿಂದ ಗ್ರಾಮಕ್ಕೆ ಕರೆತರಲಾಯಿತು. ಭಾನುವಾರ ದೇವಸ್ಥಾನದಿಂದ ಬೆಳಿಗ್ಗೆ ಪಾಲಕಿಗಳನ್ನು ತೆಗೆದುಕೊಂಡು ಹೋಗಿ ಊರ ಹೊರಗಿನ ಹಳ್ಳದಲ್ಲಿ ಹೊಳೆಸ್ನಾನ ಮಾಡಿಸಿ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪಾಲಕಿಗಳನ್ನು ಕೊಂಡ್ಯೊಯ್ದು ಪೂಜೆ ಸಲ್ಲಿಸಿ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಪೂಜಾರಿಗಳು ಕಬ್ಬಿಣದ ಗುಂಡುಗಳಿಂದ ಹೊಡೆದುಕೊಳ್ಳುವ ಹಾಗೂ ಖಡ್ಗ ಪವಾಡ, ಡೊಳ್ಳು ಕುಣಿತದ ಜೊತೆಗೆ ಸಾಹಸ ಪ್ರದರ್ಶನ ನಡೆಸಿದರು.

ಆಲಮಟ್ಟಿಯ ಪೂರ್ಣಾನಂದ ಆಶ್ರಮದ ವಶಿಷ್ಟ ಸ್ವಾಮೀಜಿ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಗ್ರಾಮಸ್ಥರು ಪಾಲಕಿಗಳಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-23-1108530018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.