ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದಲ್ಲಿ ಶರಣ ಬಸವೇಶ್ವರರ 78ನೇ ವರ್ಷದ ಪುರಾಣ ಮಹಾ ಮಂಗಲ ಹಾಗೂ ರಥೋತ್ಸವದ ಅಂಗವಾಗಿ ಸೋಮವಾರ ಸಾಮೂಹಿಕ ವಿವಾಹಗಳು ಜರುಗಿದವು.

ಸಾಮೂಹಿಕ ವಿವಾಹದಲ್ಲಿ 15 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದ ಭಕ್ತರು ಮಹಾ ದಾಸೋಹದಲ್ಲಿ ರೊಟ್ಟಿ, ಚಪಾತಿ, ಪಲ್ಯ, ಮೊಸರು, ಚಟ್ನಿ, ಮಿರ್ಚಿ, ಹೋಳಿಗೆ, ತುಪ್ಪ, ಅನ್ನ-ಸಾಂಬಾರು ಸವಿದರು.

ಸಂಜೆ ನಡೆದ ಶರಣ ಬಸವೇಶ್ವರರ ರಥೋತ್ಸವದಲ್ಲಿ ಗ್ರಾಮದ ಹಲವರು ರಥಕ್ಕೆ ಬೃಹತ್ ಹೂ ಮಾಲೆಗಳನ್ನು ಮೆರವಣಿಗೆ ಮೂಲಕ ತಂದು ಸಮರ್ಪಿಸಿದರು. ರಥೋತ್ಸವದಲ್ಲಿ ನೂರಾರು ಜನರು ಭಾಗವಹಿಸಿ ರಥಕ್ಕೆ ಉತ್ತತ್ತಿ, ಹೂಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-23-226731125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.