ಗಜೇಂದ್ರಗಡ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಬುಧವಾರ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಜೋಡು ರಸ್ತೆ, ಬಸ್ ನಿಲ್ದಾಣದ ಹತ್ತಿರ, ಗದಗ ರಸ್ತೆಗಳಲ್ಲಿನ ಸಿಸಿ ರಸ್ತೆಗಳಲ್ಲಿ ಬಹಳಷ್ಟು ಗುಂಡಿಗಳು ಬಿದ್ದಿದ್ದು, ಇದರಿಂದ ವಾಹನ ಸವಾರರಿಗೆ, ಆಟೊ ಚಾಲಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಹೀಗಾಗಿ ತ್ವರಿತವಾಗಿ ಗುಂಡಿಗಳನ್ನು ಮುಚ್ಚಿಸಿ ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ಬಳಿಕ ಪುರಸಭೆ ವ್ಯವಸ್ಥಾಪಕ ಎಚ್.ಎನ್.ಬಜಕನವರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಮಹ್ಮದಗೌಸ ಅಕ್ಕಿ, ಹನಮಂತ ಜಿಗೇರಿ, ಆಸಿಪ್ ಕಟ್ಟಿಮನಿ, ರಮೇಶ ತಳವಾರ, ಗಣೇಶ ಮುದಗಲ್, ಸಾದಿಕ್ ಮೋಮಿನ, ಆಟೋ ಚಾಲಕರ ಸಂಘದ ಶರಣಪ್ಪ ಹೂಗಾರ, ರಾಣೋಜಿ ಕಲಾಲ, ಗಣೇಶ ರಾಠೋಡ, ಆನಂದ ಕಲಾಲ, ವಿರುಪಾಕ್ಷಿ ಶಟ್ಟರ್, ಬಸವರಾಜ ಗಾಂಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-23-1912400713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.