ಗಜೇಂದ್ರಗಡ: ಹೋರಾಟಗಾರ, ಕ್ರಾಂತಿಯ ಕಿಡಿ ಸಂಗೊಳ್ಳಿ ರಾಯಣ್ಣನ ಶೌರ್ಯ, ತ್ಯಾಗ, ದೇಶಪ್ರೇಮ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಬಾದಿಮನಾಳ ಶಾಖಾ ಕನಕ ಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ರಾಜೂರ ಗ್ರಾಮದಲ್ಲಿ 16ನೇ ವರ್ಷದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕುಂಭ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ನಾಡ ರಕ್ಷಣೆಗೆ ಪ್ರಾಣಾರ್ಪಣೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಇಂದು ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ರಾಯಣ್ಣನ ಮೂರ್ತಿಯನ್ನು ಯುವಕರು ಸ್ಪೂರ್ತಿಯಾಗಿಸಿಕೊಳ್ಳುವುದರ ಜೊತೆಗೆ ರಾಯಣ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್.ಪಾಟೀಲ ಮಾತನಾಡಿ, ‘ಕಿತ್ತೂರು ಸಂಸ್ಥಾನದಲ್ಲಿ ರಾಣಿ ಚನ್ನಮ್ಮ ತಾಯಿಯ ನಂಬಿಗಸ್ಥ, ಬ್ರಿಟಿಷರ ವಿರುದ್ದ ನಾಡ ರಕ್ಷಣೆಗಾಗಿ ಹೊರಾಡಿದ ಅಪ್ರತಿಮ ಶೂರನಾಗಿದ್ದ ಕ್ರಾಂತಿವೀರ ಸಂಗೋಳಿ ರಾಯಣ್ಣ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಗ್ರಾಮದಲ್ಲಿಂದು ಅವರ ಮೂರ್ತಿ ಪ್ರತಿಷ್ಠಾಪಿಸಿ ಅನಾವರಣ ಗೊಳಿಸಿರುವುದು ಶ್ಲಾಘನೀಯ ಎಂದರು.

ಆಲಮಟ್ಟಿಯ ಪೂರ್ಣಾನಂ ಆಶ್ರಮ ಸೀತಿಮನಿ ಮಠದ ವಶಿಷ್ಟ ಸ್ವಾಮೀಜಿ, ಕೊಡಕೇರಿಯ ತೇಜಯ್ಯ ಗುರುವಿನ, ಶಿವಪ್ರಸಾದಯ್ಯ ಗುರುವಿನ, ಮಲ್ಲಯ್ಯ ಹಿರೇಮಠ, ಶಂಕ್ರಯ್ಯ ಸಾಲಿಮಠ, ಕಳಕಯ್ಯ ಸಾಲಿಮಠ ಹಾಜರಿದ್ದರು.

ಮುಖಂಡರಾದ ಸೋಮಶೇಖರ ಹಿಟ್ನಾಳ, ವೀರಣ್ಣ ಶಟ್ಟರ್, ಹೆಚ್.ಎಸ್.ಸೋಂಪುರ, ಶರಣಪ್ಪ ದೊಣ್ಣೆಗುಡ್ಡ, ಶರಣಪ್ಪ ಬೆಟಗೇರಿ, ಯೂಸುಫ್ ಇಟಗಿ, ವಿ.ಬಿ.ಹಪ್ಪಳದ, ಶರಣಪ್ಪ ಚಳಗೇರಿ, ಶಂಕ್ರಪ್ಪ ಹಾದಿಮನಿ, ಫಕೀರಪ್ಪ ಹಾದಿಮನಿ, ಮಲ್ಲಪ್ಪ ಹಾದಿಮನಿ, ಗೂಳಪ್ಪ ಕಮಾಟ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-23-113542053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.