ಗಜೇಂದ್ರಗಡ: ಭಾವೈಕ್ಯತೆಗೆ ಹೆಸರಾಗಿರುವ ಗಜೇಂದ್ರಗಡದಲ್ಲಿ ಮೇ 1ರಂದು ಐತಿಹಾಸಿಕ ಟಕ್ಕೇದ ದರ್ಗಾದ ಉರುಸ್ ನಡೆಯಲಿದೆ.

ಹಲವು ಶತಮಾನಗಳ ಇತಿಹಾಸ ಹೊಂದಿರುವ ಟಕ್ಕೇದ ದರ್ಗಾದಲ್ಲಿ ಸೂಫಿ ಸಂತರಾಗಿದ್ದ ಹಜರತ್ ಸೈಯದ್ ಮಾಸುಮ್ ಅಲಿಶಾ ಪೀರಾಂ, ಹಜರತ್ ನಿಸಾರ ಅಲಿಶಾ ಪೀರಾಂ ಅವರುಗಳು ಟಕ್ಕೇದ ದರ್ಗಾದ ಪೀಠಾಧಿಪತಿಗಳಾಗಿ ಧಾರ್ಮಿಕ ಕಾರ್ಯಗಳ ಮೂಲಕ ಭಾವೈಕ್ಯದ ಕೊಂಡಿಯಾಗಿದ್ದರು. 1965ರಲ್ಲಿ ಹಜರತ್ ಸೈಯದ್ ನಿಶಾರ ಅಲಿಶಾ ಪೀರಾಂ ಅವರಿಂದ ಗುರುದೀಕ್ಷೆ ಪಡೆದು ದರ್ಗಾದ 7ನೇ ಪೀಠಾಧಿಪತಿಗಳಾಗಿದ್ದ ಹಜರತ್ ಸೈಯದ್ ಮೆಹಬೂಬ್ ಅಲಿಶಾ ಪೀರಾಂ ಅವರು ದರ್ಗಾದ ಭಕ್ತರ ಪ್ರೀತಿಯ ಟಕ್ಕೇದ ಬಾಬಾ, ಟಕ್ಕೇದ ಅಜ್ಜ ಎಂದೇ ಜನಜನಿತರಾಗಿದ್ದರು.

ಜಾತಿ-ಮತ, ಪಂತ ಭೇದ ಎಣಿಸದೇ ಬಂದ ಭಕ್ತರನ್ನು ಪ್ರೀತಿಯಿಂದ ಕಂಡು ಅವರ ಕಷ್ಟಗಳಿಗೆ ಮಾನಸಿಕ ಸ್ಥೈರ್ಯದ ಜೊತೆಗೆ ಮಂತ್ರೌಷಧಿ ನೀಡಿ ಅವರ ಕಷ್ಟ, ಕಾಯಿಲೆಗಳನ್ನು ನಿವಾರಿಸುವ ಕಾರ್ಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. 2015ರಲ್ಲಿ ಹಜರತ್ ಸೈಯದ್ ನಿಜಾಮುದ್ದಿನ್ ಶಾ ಮಕಾನದಾರ ಅವರು ದರ್ಗಾದ 8ನೇ ಪೀಠಾಧಿಪತಿಗಳಾಗಿ ಈ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಗಜೇಂದ್ರಗಡ ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ದರ್ಗಾಕ್ಕೆ ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಬುದ್ಧ ಪೌರ್ಣಿಮೆ ದಿನ ದರ್ಗಾದ ಉರುಸ್ ನಡೆಯುತ್ತದೆ. ಅಲ್ಲದೆ ಅದೇ ದಿನ ಪಟ್ಟಣದ ಕೆಳಗಲ ಪೇಟೆ ದುರ್ಗಾದೇವಿ ರಥೋತ್ಸವಕ್ಕೆ ದರ್ಗಾದ ಪೀಠಾಧಿಪತಿಗಳಿಂದ ಹೂಮಾಲೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ಸಿಗುತ್ತದೆ. ಬಳಿಕ ಅಲ್ಲಿಂದ ಹಜರತ್ ಸೈಯ್ಯದ್ ನಿಶಾದ ಅಲಿಶಾ ದರ್ಗಾಕ್ಕೆ ತೆರಳಿ ಗಂಧ ಲೇಪನ ಮಾಡುವ ಪ್ರಕ್ರಿಯೆ ನಡೆಯುತ್ತದೆ. ರಥೋತ್ಸವದಲ್ಲಿ ಭಾಗವಹಿಸಿದ ಭಕ್ತರು ಹಾಗೂ ದರ್ಗಾದ ಭಕ್ತರು ದರ್ಗಾದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ.

ಗಜೇಂದ್ರಗಡ ಪಟ್ಟಣ ಹಿಂದಿನಿಂದಲೂ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ. ಪಟ್ಟಣದಲ್ಲಿ 18 ಬಾವಿ, 18 ಮಸೀದಿ, 18 ಮಠಗಳಿವೆ. ಗಜೇಂದ್ರಗಡದ ಜನತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಸಾಮರಸ್ಯದಿಂದ ಬದುಕು ನಡೆಸುತ್ತಿದ್ದಾರೆ. ಭಾವೈಕ್ಯತೆಗೆ ಸಾಕ್ಷಿಯಾಗಿರುವ ಟಕ್ಕೇದ ದರ್ಗಾದಲ್ಲಿ ಏ.30 ರಂದು ಸಂದಲ್ (ಗಂಧ) ಇದ್ದು, ಗಂಧವು ಸಂಜೆ 7 ಗಂಟೆಗೆ ಕೆಳಗಲ ಪೇಟೆಯ ತಟಗಾರ ಇವರ ಮಸೀದಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಟಕ್ಕೇದ ಮಸೀದಿ ತಲುಪಲಿದೆ.

ಮೇ 1ರಂದು ಉರುಸ್ ಇದ್ದು, ರಾತ್ರಿ 8 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಮೇ 2ರಂದು ಬೆಳಿಗ್ಗೆ 6ಕ್ಕೆ ಜಿಯಾರತ್ ಫಾರಿಹಾ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲ ಭಕ್ತರು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಟಕ್ಕೇದ ದರ್ಗಾ ಪೀಠಾಧಿಪತಿ ಹಜರತ್ ಸೈಯದ್ ನಿಜಾಮುದ್ದಿನ್ ಶಾ ಮಕಾನದಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.