ಗಜೇಂದ್ರಗಡ: ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದ ಸಮೀಪದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿ ದಿನದಂದು ಒಂದು ಚಿಕ್ಕ ಪೊಟರೆಯಲ್ಲಿ ಜಿನಗುವ ನೀರನ್ನು ನೋಡಿ ವರ್ಷದ ಮಳೆ–ಬೆಳೆಯ ಭವಿಷ್ಯ ಅರಿಯುತ್ತಾರೆ.

ಪ್ರತಿವರ್ಷ ದವನದ ಹುಣ್ಣಿಮೆ ದಿನ ನಡೆಯುವ ಕಾಲಕಾಲೇಶ್ವರನ ಜಾತ್ರೆಗೆ ಚಂದ್ರಮಾನ ಯುಗಾದಿ ದಿನದಂದು ಚಾಲನೆ ದೊರೆಯುತ್ತದೆ. ಅಂದು ಬೆಳಗಿನ ಜಾವ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನಂತರ ರಥದ ಕೋಣೆಯಿಂದ ರಥವನ್ನು ಐದು ಹೆಜ್ಜೆ ಎಳೆದು ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೇವು ಬೆಲ್ಲ ನೀಡಲಾಗುತ್ತದೆ.

ಯುಗಾದಿ ಅಮವಾಸ್ಯೆ ಸಂಜೆ ದೇವಸ್ಥಾನದಲ್ಲಿ ಗಡಿಗೆಯಲ್ಲಿ ಸುಣ್ಣ ಹಾಗೂ ಸುರುಮ ಹಾಕಿ ಇಡಲಾಗುತ್ತದೆ. ಬೆಳಗಾಗುವಷ್ಟರಲ್ಲಿ ಮನುಷ್ಯರಿಗೆ ನಿಲುಕದ ಗುಡ್ಡದ ಪಡಿಯಲ್ಲಿ ಸುಣ್ಣ ಸುರುಮ ಹಚ್ಚಿರುವ ಕುರುಹುಗಳು ಕಾಣಿಸುತ್ತವೆ. ಸುಣ್ಣ ಸುರುಮ ಹಾಕಿಟ್ಟ ಗಡಿಗೆಗಳು ಖಾಲಿಯಾಗಿರುತ್ತವೆ. ಸುಣ್ಣ ಕಪ್ಪು ಭೂಮಿ ಹಾಗೂ ಸುರುಮ ಮಸಾರಿ ಭೂಮಿಯ ಬೆಳೆಗಳನ್ನು ಸೂಚಿಸುತ್ತದೆ. ಯಾವ ಭಾಗದಲ್ಲಿ ಹೆಚ್ಚು ಹತ್ತಿರುತ್ತದೆಯೋ ಆ ಭಾಗದಲ್ಲಿ ಬೆಳೆಗಳು ಸಮೃದ್ದವಾಗಿ ಬೆಳೆಯುತ್ತವೆ ಎಂಬುದು ಜನರ ನಂಬಿಕೆಯಾಗಿದೆ.

ದವನದ ಹುಣ್ಣಿಮೆ ದಿನ ಆಕಾಶದಲ್ಲಿ ಚಿತ್ತಾ ನಕ್ಷತ್ರದ ದರ್ಶನವಾಗುತ್ತಿದ್ದಂತೆ ಕಾಲಕಾಲೇಶ್ವರನ ರಥೋತ್ಸವಕ್ಕೆ ಚಾಲನೆ ದೊರೆಯುತ್ತದೆ. ರಥೋತ್ಸವದ 9 ದಿನಗಳ ಮುಂಚೆ ರಾತ್ರಿ ದೇವಸ್ಥಾನದಲ್ಲಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಬಸವ ಪಟ (ಲಗ್ನ ಪತ್ರಿಕೆ) ಕಟ್ಟಿಸುತ್ತಾರೆ. ಅಂದಿನಿಂದ 9 ದಿನಗಳ ಕಾಲ ಪ್ರತಿದಿನ ರಾತ್ರಿ ಒಂದೊಂದು ವಾಹನದ ಮೇಲೆ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಉಚ್ಚಯ್ಯ ಎಳೆಯಲಾಗುತ್ತದೆ. ರಥೋತ್ಸವದ ಹಿಂದಿನ ದಿನ ಮದುವೆ ನಡೆಸಿ ಮರುದಿನ ರಥದಲ್ಲಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-23-1023543539

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.