ಗಜೇಂದ್ರಗಡ ಪುರಸಭೆಯಲ್ಲಿ ಅರಳಿದ ಕಮಲ..!

7

ಗಜೇಂದ್ರಗಡ ಪುರಸಭೆಯಲ್ಲಿ ಅರಳಿದ ಕಮಲ..!

Published:
Updated:
Deccan Herald

ಗಜೇಂದ್ರಗಡ: ತಾಲ್ಲೂಕು ಕೇಂದ್ರವಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆ ಆಡಳಿತವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಗಜೇಂದ್ರಗಡ ಪುರಸಭೆಯ ಒಟ್ಟು 23 ವಾರ್ಡ್‌ಗಳಲ್ಲಿ, 18 ಸ್ಥಾನಗಳನ್ನು ಗೆಲ್ಲುವುದರ ಹಿಂದೆ ಶಾಸಕ ಕಳಕಪ್ಪ ಬಂಡಿ ಅವರ ಪ್ರಭಾವ ದಟ್ಟವಾಗಿ ಕೆಲಸ ಮಾಡಿದೆ. 2013ರಲ್ಲಿ ಇಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ ಇಲ್ಲಿ ಜಯಗಳಿಸಿತ್ತು. ಈ ಬಾರಿ 1 ಸ್ಥಾನ ಹೆಚ್ಚಿದೆ. ಕಾಂಗ್ರೆಸ್‌ ಸಂಖ್ಯಾಬಲದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಬಾರಿಯೂ ಐವರು ಆಯ್ಕೆಯಾಗಿದ್ದಾರೆ. ಜೆಡಿಎಸ್‌, ಸಿಪಿಎಂ ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರೂ,ಮತದಾರ ಅವರಿಗೆ ಮಣೆ ಹಾಕಿಲ್ಲ.

5 ವಾರ್ಡ್‌ಗಳಲ್ಲಿ ಸಿಪಿಎಂ, 4 ವಾರ್ಡ್‌ಗಳಲ್ಲಿ ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 56 ಮಂದಿ ಕಣದಲ್ಲಿದ್ದರು. ಕಾಂಗ್ರೆಸ್, ಬಿಜೆಪಿ, ಸಿಪಿಎಂ ಪಕ್ಷಗಳಿಂದ ಒಂದೇ ಸಮುದಾಯದ ಮೂರು ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ 3ನೇ ವಾರ್ಡ್‌ ಕುತೂಹಲಕ್ಕೆ ಕಾರಣವಾಗಿತ್ತು. ಇಲ್ಲಿ ಕಾಂಗ್ರೆಸ್‌ನ ಶಿವರಾಜ ಘೋರ್ಪಡೆ 26 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 12ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಕನಕಪ್ಪ ಅರಳಿಗಿಡದ ಕೇವಲ 3 ಮತಗಳ ಅಂತರದಿಂದ ಕಾಂಗ್ರೆಸ್‌ನ ಸುಮಂಗಲಾ ಇಟಗಿ ಅವರನ್ನು ಪರಾಭವಗೊಳಿಸಿದ್ದಾರೆ.

20ನೇ ವಾರ್ಡಿನ ಬಿಜೆಪಿಯ ಶರಣಪ್ಪ ಉಪ್ಪಿನಬೇಟಗೇರಿ 695 ಮತಗಳ ಭಾರಿ ಅಂತರದಿಂದ ಕಾಂಗ್ರೆಸ್‌ನ ಲಕ್ಷ್ಮಣ ತಳವಾರ ಅವರನ್ನು ಪರಾಭವಗೊಳಿಸಿದ್ದಾರೆ. ದಶಕಗಳಿಂದ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ 10ನೇ ವಾರ್ಡಿನಲ್ಲಿ ಈ ಬಾರಿ ಕಮಲ ಅರಳಿದೆ. ಬಿಜೆಪಿಯ ರೂಪಲೇಶ ರಾಠೋಡ 81 ಮತಗಳ ಅಂತರದಿಂದ ಕಾಂಗ್ರೆಸ್‌ನ ಪರಸಪ್ಪ ಗುಗಲೋತ್ತರ ಅವರನ್ನು ಮಣಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !