ಗ್ರಾಮದ ಮರಿಯಪ್ಪ ಮ್ಯಾಗೇರಿ, ದ್ಯಾಮಪ್ಪ ಮ್ಯಾಗೇರಿ, ಲಚಮಪ್ಪ ದಿವಾಣದ ಎಂಬುವವರು ತಮ್ಮ ಆಡು ಮತ್ತು ಕುರಿಗಳನ್ನು ಹಾಳಾದ ಬದನೆಕಾಯಿ ತೋಟಕ್ಕೆ ಮೇಯಿಸಲು ಹೋಗಿದ್ದಾರೆ. ಹೊಲದಲ್ಲಿದ್ದ ಹುಳು ಹತ್ತಿದ ಬದನೆಕಾಯಿ ತಿಂದು ಹೊಟ್ಟೆ ನೋವಿನಿಂದ ಮೃತಪಟ್ಟಿದ್ದು, ಹಲವು ಆಡು ಮತ್ತು ಕುರಿಗಳು ಅಸ್ವಸ್ಥಗೊಂಡಿವೆ. ಸ್ಥಳಕ್ಕೆ ಗಜೇಂದ್ರಗಡ ಪಶು ಇಲಾಖೆ ಸಿಬ್ಬಂದಿ ಭೇಟಿ ನೀಡಿ ಅಸ್ವಸ್ಥಗೊಂಡಿರುವ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.