ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಜನೂರು: ಬಣ್ಣದ ಹಬ್ಬದ ಸಂಭ್ರಮ

Last Updated 20 ಮಾರ್ಚ್ 2022, 5:07 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮೀಪದ ಗೊಜನೂರ ಗ್ರಾಮದಲ್ಲಿ ಶನಿವಾರ ಹೋಳಿ ಹಬ್ಬದ ಅಂಗವಾಗಿ ಓಕುಳಿ ಆಚರಿಸಲಾಯಿತು. ಗ್ರಾಮದ ಗ್ರಾಮದೇವಿಯ ದೇವಸ್ಥಾನದ ಮುಂದೆ ಸರ್ಕಾರಿ ಕಾಮನ ದಹನ ಮಾಡುವ ಮೂಲಕ ರಂಗಿನ ಹಬ್ಬಕ್ಕೆ ಚಾಲನೆ ದೊರೆಯಿತು.

ಗ್ರಾಮದ ಜಗಜ್ಯೋತಿ ಬಸವೇಶ್ವರ ಭಜನಾ ಸಂಘದ ವತಿಯಿಂದ ಸರ್ಕಾರಿ ಕಾಮನನ್ನು ದಹನ ಮಾಡಿದರು. ಮಲ್ಲಿಕಾರ್ಜುನ ಭಜನಾ ಸಂಘ, ಬಸವೇಶ್ವರ ಭಜನಾ ಸಂಘಗಳು ಜಂಟಿಯಾಗಿ ಓಕುಳಿ ಹಬ್ಬವನ್ನು ಆಚರಿಸಿದರು.

ಓಕುಳಿ ಹಬ್ಬದ ಅಂಗವಾಗಿ ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಬಂಡಿ ಹೂಡಿ ಅದರಲ್ಲಿ ಬಣ್ಣ ತುಂಬಿದ ಹಂಡೆಗಳನ್ನು ಇಟ್ಟುಕೊಂಡು ಗ್ರಾಮದಲ್ಲಿ ಸಂಚರಿಸಿ ಎಲ್ಲರಿಗೂ ಬಣ್ಣ ಉಗ್ಗಿ ಖುಷಿ ಪಟ್ಟರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಿಕ್ಕ ಮಕ್ಕಳು, ಯುವಕರು ಹಾಗೂ ಹಿರಿಯರು ಬಣ್ಣದಲ್ಲಿ ಮಿಂದೆದ್ದರು. ಯುವಕರು ಹಲಿಗೆ ಬಾರಿಸುತ್ತ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸಿ ಪರಸ್ಪರ ಬಣ್ಣ ಎರಚಿಕೊಂಡು ಸಂತಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT