ಶುಕ್ರವಾರ, ಡಿಸೆಂಬರ್ 6, 2019
21 °C

ಗೂಬೆ ಮುಖದ ಕುರಿಮರಿ: ನೋಡಲು ಮುಗಿಬಿದ್ದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೂಬೆ ಮುಖದ ಕುರಿಮರಿ

ನರೇಗಲ್: ಇಲ್ಲಿಗೆ ಸಮೀಪದ ಮಾರನಬಸರಿ ಗ್ರಾಮದ ನಿವಾಸಿ ಯತಿಮಸಾಬ ಚಾಂದಖಾನ್ ಎಂಬುವರ ಮನೆಯಲ್ಲಿ ಗೂಬೆ ಮುಖ ಹೋಲುವ ಕುರಿಮರಿಯೊಂದು ಜನಿಸಿದ್ದು, ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.

ಕುರಿಮರಿಯ ಮುಖ ಮಾತ್ರ ಗೂಬೆಯನ್ನು ಹೋಲುವಂತಿದೆ. ಸೀಳು ತುಟಿಯಿಂದಾಗಿ ವಿಚಿತ್ರವಾಗಿ ಕಾಣಿಸುತ್ತಿದೆ. ಮೂಗು ಇಲ್ಲ. ಬಾಯಿ ಮೂಲಕವೇ ಕುರಿಮರಿ ಉಸಿರಾಡುತ್ತಿದೆ. ಬಾಯಿ ಹಾಗೂ ಕಣ್ಣು ಒಂದಕ್ಕೊಂದು ಸೇರಿಕೊಂಡಂತಿದೆ. ಈ ಅಚ್ಚರಿಯನ್ನು ನೋಡಲು ಬರುತ್ತಿರುವ ಜನರು ತಮ್ಮದೇ ಆದ ಚರ್ಚೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

‘ಇಂತಹ ಮರಿಗಳು ಜನಿಸುವುದು ವಿರಳ. ಅನುವಂಶೀಯತೆ ಕಾರಣಕ್ಕೆ ಇಂತಹ ರೂಪಾಂತರ ಆಗುತ್ತದೆ. ಇದನ್ನು ‘ಕ್ರೊಮೋಸೋಮ್ ಜಿನೆಟಿಕ್ 16 ಮಿಲಿಟ್’ ಎಂದು ಗುರುತು ಹಿಡಿಯಲಾಗುತ್ತದೆ. ಬದುಕಿ ಉಳಿದರೆ, ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ಸರಿಹೊಗುವ ಸಾಧ್ಯತೆಗಳೂ ಇರುತ್ತವೆ’ ಎಂದು ರೋಣ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಚ್.ಬಿ. ಹುಲಗಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು