ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಯಲ್ಲಿ ಭೂದಿನಾಚರಣೆ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನ ವಿಭಾಗದ ವತಿಯಿಂದ ಜ್ಞಾನಭಾರತಿಯಲ್ಲಿ ಈಚೆಗೆ ಭೂಮಿ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳು ಭೂಮಿಯ ಮಹತ್ವದ ಕುರಿತು ಸಾರ್ವಜನಿಕರು ಹಾಗೂ ಸಹಪಾಠಿಗಳಲ್ಲಿ ಅರಿವು ಮೂಡಿಸಿದರು.

ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ (ಎನ್.ಎ.ಎಲ್.) ನಿವೃತ್ತ ವಿಜ್ಞಾನಿ ಡಾ.ಎಸ್.ಎಸ್.ದೇಸಾಯಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೂರ್ಯನ ಶಕ್ತಿಯೊಂದೇ ಭೂಮಿಗೆ ಜೀವಾಳ ಎಂದು ಪ್ರತಿಪಾದಿಸಿದರು.

ಭೂಮಿಯ ಮೇಲಿನ ಮಾನವ ಅಳಿವಿನ ಅಂಚಿನಲ್ಲಿದ್ದಾನೆ. ಉಷ್ಣಾಂಶ ಹೆಚ್ಚುತ್ತಿರುವುದರಿಂದಾಗಿ ಇಡಿ ಭೂಮಂಡಲವೇ ಹಲವು ಪರಿಣಾಮಗಳನ್ನು ಎದುರಿಸುತ್ತಿದೆ. ಕಾರ್ಬನ್ ಡೈ ಆಕ್ಸೈಡ್‍ ಹೆಚ್ಚುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದರು. ಭೂಗೋಳ ವಿಜ್ಞಾನದ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಸ್.ರಾಯಮಾನೆ, ಸಂಯೋಜಕ ಪ್ರೊ.ಅಶೋಕ್ ಡಿ. ಹಂಜಗಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಈಶ್ವರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT