ಶುಕ್ರವಾರ, ಮೇ 20, 2022
23 °C
ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಆಗ್ರಹ

ನೇಕಾರ ನಿಗಮ ಸ್ಥಾಪನೆಗೆ ಕ್ರಮವಹಿಸಿ: ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಮೂಲ ನೇಕಾರರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು’ ಎಂದು ಕುರಹಿನಶೆಟ್ಟಿ ಸಮಾಜದ ಮೂಲ ಪೀಠಾಧೀಶ್ವರ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.

‘ಸರ್ಕಾರ ಈಗಾಗಲೇ ನೇಕಾರ ವೃತ್ತಿ ಆಧರಿತ ಅಭಿವೃದ್ಧಿ ನಿಗಮಗಳಾದ ಕೆಎಚ್‍ಡಿಸಿ ಕಾವೇರಿ ಹ್ಯಾಂಡ್‌ಲೂಮ್ಸ್, ಕೆಎಸ್‍ಪಿಡಿಸಿ ನಿಗಮಗಳನ್ನು ಸ್ಥಾಪಿಸಿದೆ. ಆದರೆ ನೇಕಾರಿಕೆ (ಮೂಲ) ಜಾತಿಗಳಿಗೆ ಇದರ ಸೌಲಭ್ಯ ಸಿಗದೇ ಇತರೆ ನೇಕಾರಿಕೆ ಸಮುದಾಯಗಳಿಗೆ ಹರಿದು ಹಂಚಿ ಹೋಗಿದೆ. ಆದ್ದರಿಂದ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಕ್ರಮವಹಿಸಬೇಕು ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮರಾಠ ನಿಗಮ, ಲಿಂಗಾಯತ ನಿಗಮ ಸೇರಿದಂತೆ ಸರ್ಕಾರ ಈಗಾಗಲೇ ಜಾತಿ ಆಧರಿತ ನಿಗಮಗಳನ್ನು ರಚಿಸಿದೆ. ಆದರೆ, ನೇಕಾರಿಕೆ ವೃತ್ತಿ ಅವಲಂಬಿಸಿದ ಮೂಲ ನೇಕಾರ ಸಮುದಾಯದ ನಿಗಮ ಸ್ಥಾಪನೆ ಮಾಡುವುದರಿಂದ ಅಂತವರನ್ನು ಮೇಲೆ ತರಬಹುದು’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಈ ಹಿಂದೆ ಜಾತಿ ವಿಂಗಡಣೆ ವೇಳೆ ಗೆಜೆಟ್ 75, 76ರಲ್ಲಿ ಬರುವ ಕುರುಹಿನಶೆಟ್ಟಿ, ದೇವಾಂಗ, ಕೋಷ್ಠ, ಜೀಡ, ಹಟಗಾರ, ಬಿಳಿಮಗ್ಗ, ತೊಗಟವೀರ, ಪಟ್ಟಸಾಲಿ, ಪದ್ಮಸಾಲಿ, ಸ್ವಕುಳಸಾಳಿ, ಜಾಡರ್ ಸೇರಿದಂತೆ 26 ಜಾತಿಗಳನ್ನು ಅಧಿಕೃತ ನೇಕಾರ ಸಮುದಾಯಗಳು ಎಂದು ಘೋರ್ಷಣೆ ಮಾಡಿದೆ. ಅದರಂತೆ ಪ್ರವರ್ಗ (2ಎ)ನಲ್ಲಿ ಒಟ್ಟು 102 ಜಾತಿಗಳು 366 ಉಪಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ಮಾಡಿದ್ದಾರೆ. ಇದರಲ್ಲಿ ಬಹಳಷ್ಟು ಜಾತಿ, ಉಪಜಾತಿಗಳು ಬರುವುದರಿಂದ ನೇಕಾರ ಸಮುದಾಯಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರದ ಉದ್ದೇಶಿತ ಯೋಜನೆಗಳು ಸಿಗುತ್ತಿಲ್ಲ’ ಎಂದರು.

ದೇವೇಂದ್ರಪ್ಪ ಗೋಟೂರ, ಜಗದೀಶ ಬಿದರೂರ, ಮಲ್ಲಿಕಾರ್ಜುನ ಐಲಿ, ರಘುನಾಥ ತುಕ್ಕಾ, ನಿಂಗಪ್ಪ ಜೇಗೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು