ತಡಸ: ಪ್ರವಾಸಿಗರಿಗೆ ಕೇವಲ ಮನೋರಂಜನೆ ಅಷ್ಟೆ ಅಲ್ಲದೆ ಅವರಿಗೆ ಊಟ ಉಪಹಾರ ನೀಡಿ ಸಂತೃಪ್ತಿಗೊಳಿಸುವ ಕಾರ್ಯವನ್ನು ಅಗಡಿ ತೋಟದ ಜಯದೇವ ಅಗಡಿ ಅವರು ಮಾಡುತ್ತಿದ್ದಾರೆ ಎಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಕುನ್ನೂರ ಗ್ರಾಮದ ಅಗಡಿ ತೋಟಕ್ಕೆ ಶುಕ್ರವಾರ ಆಗಮಿಸಿದ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

‘ನಾನು ಮೂರನೇ ಭಾರಿಗೆ ಅಗಡಿ ತೋಟಕ್ಕೆ ಬರುತ್ತಿರುವುದು. ಪ್ರತಿ ಭಾರಿ ಬಂದಾಗಲೂ ಕೂಡ ಜಯದೇವ ಅಗಡಿ ಹಾಗೂ ಇಲ್ಲಿರುವ ಸಿಬ್ಬಂದಿ ನನ್ನನ್ನು ಬಹಳ ಭಕ್ತಿ ಭಾವದಿಂದ ಸ್ವಾಗತಿಸಿ ಆತಿಥ್ಯ ನೀಡುತ್ತಾರೆ’ ಎಂದರು.

‘ಜಯದೇವ ಅಗಡಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ತೋಟ ನಿರ್ಮಿಸಿ ಬಂದಿರುವಂತ ಪ್ರವಾಸಿಗರ ಮನ ತಣಿಸುವ ಕೆಲಸ ಮಾಡುತ್ತಿದ್ದಾರೆ. ಜೀವಂತವಾದ ಪ್ರಾಣಿ ಪಕ್ಷಿಗಳನ್ನು ಸಾಕಿ ಪ್ರವಾಸಿಗರಿಗೆ ಸಂತೋಷಪಡಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ’ ಎಂದು ಹೇಳಿದರು.

‘ಇದರ ಜೊತೆಗೆ ಬಡಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರಿಗೂ ಸಹ ಆಶ್ರಯದಾತರಾಗಿದ್ದಾರೆ. ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಜಯದೇವ ಅಗಡಿ ಅವರಿಗೂ ಅವರ ಕುಟುಂಬಕ್ಕೆ ಭಗವಂತ ಆಯುಷ್ಯ ಅರೋಗ್ಯ ನೀಡಲಿ’ ಎಂದು ಆಶೀರ್ವದಿಸಿದರು.

ಕುನ್ನೂರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲವನಗೌಡ ಪಾಟೀಲ್, ಬಸಯ್ಯ ಹಿರೇಮಠ, ಬಸನಗೌಡ ಬ್ಯಾಹಟ್ಟಿ, ಈರಣ್ಣ ವಾಲೀಕಾರ, ವಿಠ್ಠಲ್ ದುಂಡಪ್ಪನವರ, ಮೈಲಾರಿ ಅಗಸರ, ಜೀಲಾನಿ ಮತ್ತೇಖಾನ್ ಹಲವಾರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-22-142426420

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.