ಗುತ್ತಲ: ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು ವಾಹನಗಳ ಸಂಚಾರ ಆರಂಭವಾಗಿದೆ.

ಆದರೆ ಕೆಲವು ಸ್ಥಳಗಳಲ್ಲಿ ವೃತ್ತಗಳನ್ನು ನಿರ್ಮಿಸಲಾಗಿದೆ. ಹೆದ್ದಾರಿಗೆ ಅಡ್ಡಲಾಗಿ ಹಾಯ್ದು ಹೋಗಿರುವ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಹಾಕಿಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿವೆ.

ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಣ ಹೋಗುವ ಮುನ್ನ ವೃತ್ತಗಳಿಗೆ ಹಾಗೂ ರಸ್ತೆಗಳಲ್ಲಿ ಸೂಚನಾಫಲಕ ಹಾಕಬೇಕು. ಹಂಪ್ಸ್ಗಳನ್ನು ನಿರ್ಮಿಸ ಬೇಕು ಎಂದು ಪಟ್ಟಣದ ಜನರು ಆಗ್ರಹಿಸಿದ್ದಾರೆ.

ಪಟ್ಟಣದ ಹೊರವಲಯದ ಗುತ್ತಲ-ಹಾವನೂರ ರಸ್ತೆಯ ಅಡ್ಡಲಾಗಿ ಹಾಯ್ದು ಹೋಗುವ ಗದಗ- ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಆಕಾರದ ವೃತ್ತವನ್ನು ನಿರ್ಮಾಣ ಮಾಡಿದ್ದಾರೆ.

ವೃತ್ತ ಮತ್ತು ರಸ್ತೆಗಳಲ್ಲಿ ಯಾವುದೇ ಸೂಚನಾ ಫಲಕ ಇಲ್ಲದ ಕಾರಣ ವಾರದ ಹಿಂದೆ ಶಿವಮೊಗ್ಗ ನಗರದ ಕಾರು ಮತ್ತು ಗುತ್ತಲ ಪಟ್ಟಣದ ಕ್ರಷರ್ ಮಧ್ಯೆ ಅಪಘಾತ ಸಂಭವಿಸಿ 6 ಜನ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಣೆಬೆನ್ನೂರ ಕಡೆಯಿಂದ ಗದಗ ಕಡೆಗೆ ಹೋಗುವ ವಾಹನಗಳು ವೇಗವಾಗಿ ಹೋಗುತ್ತವೆ. ಹಾವನೂರ ಮತ್ತು ವಿಜಯನಗರ ಹಾಗೂ ಬಳ್ಳಾರಿ ಕಡೆಯಿಂದ ಬರುವ ವಾಹನಗಳ ಚಾಲಕರು ವೃತ್ತದಲ್ಲಿ ನಿಧಾನವಾಗಿ ಚಾಲನೆ ಮಾಡಬೇಕು ಎಂದು ಗುತ್ತಲ ಪಿಎಸ್ಐ ಸೂಚಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-22-640612540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.