ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ಜೋರು ಮಳೆ, ಸಿಡಿಲಿಗೆ ತೆಂಗಿನ ಮರಕ್ಕೆ ಬೆಂಕಿ

Last Updated 14 ಏಪ್ರಿಲ್ 2021, 15:22 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

ಬುಧವಾರ ಸಂಜೆ 5ಕ್ಕೆ ಆರಂಭವಾದ ಬಿರುಗಾಳಿ, ಗುಡುಗು ಸಹಿತ ಮಳೆ ಅರ್ಧ ಗಂಟೆಗಳ ಕಾಲ ಉತ್ತಮವಾಗಿ ಸುರಿಯಿತು. ಬಿರುಗಾಳಿಗೆ ಹಲವು ಮರಗಳು ಧರೆಗೆ ಉರುಳಿದವು. ಸಮೀಪದ ರಾಜೂರ ಗ್ರಾಮದಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಉರುಳಿ ಬಿದ್ದಿದೆ. ಮಹಡಿ ಮನೆಯಾಗಿದ್ದರಿಂದ ಯಾವುದೇ ಹಾನಿಯಾಗಿಲ್ಲ. ಮತ್ತೊಂದು ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಹೊತ್ತಿ ಉರಿಯಿತು. ನಂತರ ಮಳೆ ಬಂದಿದ್ದರಿಂದ ಬೆಂಕಿ ನಂದಿತು.

ಪಟ್ಟಣದ ಚರಂಡಿಗಳು ಅಲ್ಲಲ್ಲಿ ಕಟ್ಟಿಕೊಂಡಿದ್ದು, ಮಳೆಯಿಂದಾಗಿ ನೀರು ಉಕ್ಕಿ ಹರಿದ ಪರಿಣಾಮ ರಸ್ತೆ ತುಂಬೆಲ್ಲಾ ತ್ಯಾಜ್ಯ ನೀರು ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT