ಗದಗ: ಹೆಸರುಕಾಳು ಖರೀದಿ; ಆನ್‌ಲೈನ್‌ ನೋಂದಣಿ ಆರಂಭ

7

ಗದಗ: ಹೆಸರುಕಾಳು ಖರೀದಿ; ಆನ್‌ಲೈನ್‌ ನೋಂದಣಿ ಆರಂಭ

Published:
Updated:

ಗದಗ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಹೆಸರುಕಾಳು ಖರೀದಿಸಲು ಶನಿವಾರದಿಂದ ಆನ್‌ಲೈನ್‌ ನೋಂದಣಿ ಪ್ರಾರಂಭವಾಗಿದೆ.

ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ‘ಎಂಎಸ್‌ಪಿ’ಕೇಂದ್ರಗಳು ಆರಂಭವಾಗಿ ಒಂದು ವಾರ ಕಳೆದರೂ, ಸಾಫ್ಟ್‌ವೇರ್‌ ಸಮಸ್ಯೆಯಿಂದಾಗಿ ನೋಂದಣಿ ಪ್ರಾರಂಭವಾಗಿರಲಿಲ್ಲ. ನೋಂದಣಿ ಮಾಡಿಕೊಳ್ಳಲು ಸೆ.9 ಕೊನೆಯ ದಿನವಾದ್ದರಿಂದ ರೈತರ ಆತಂಕ ಹೆಚ್ಚಿತ್ತು.

‘ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಶನಿವಾರದಿಂದ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ನೋಂದಣಿ ಪ್ರಾರಂಭವಾಗಿದೆ. ಸಹಕಾರ ಮಹಾಮಂಡಳ ನೋಂದಣಿ ಅವಧಿಯನ್ನೂ ಸೆ.16ರವರೆಗೆ ವಿಸ್ತರಿಸಿದೆ’ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಫ್ಟ್‌ವೇರ್‌ ಸಮಸ್ಯೆ ಬಗೆಹರಿದಿದೆ. ಶನಿವಾರ ಜಿಲ್ಲೆಯ ಎಲ್ಲ ಖರೀದಿ ಕೇಂದ್ರಗಳಿಗೆ ಪ್ರತ್ಯೇಕ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಲಭಿಸಿದೆ.ರಜಾ ದಿನ ಆಗಿದ್ದರಿಂದ ಹೆಚ್ಚಿನ ರೈತರು ಖರೀದಿ ಕೇಂದ್ರಕ್ಕೆ ಬಂದಿಲ್ಲ. ಸೋಮವಾರದಿಂದ ನೋಂದಣಿ ಚುರುಕು ಪಡೆಯಲಿದೆ’ಎಂದು ಸಹಕಾರ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್‌ ಪತ್ರಿಕೆಗೆ ತಿಳಿಸಿದರು.

ರೈತರಿಂದ ಹೆಸರು ಕಾಳು ಖರೀದಿಸಲು ಆನ್‌ಲೈನ್‌ ನೋಂದಣಿಗಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್)        ‘ಇ–ಸಮೃದ್ಧಿ’ಎಂಬ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ. ಖರೀದಿ ಕೇಂದ್ರದ ಸಿಬ್ಬಂದಿಗೆ ಈ ತಂತ್ರಾಂಶ ಬಳಸಲು ಬೇಕಿರುವ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಲಭಿಸಿರಲಿಲ್ಲ. ಹೀಗಾಗಿ ನೋಂದಣಿ ವಿಳಂಬವಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !