ರೋಣ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ಯುವ ಪೀಳಿಗೆ ಅನ್ಯ ಮಾರ್ಗ ತುಳಿಯುತ್ತಿರುವುದು ಆತಂಕದ ಸಂಗತಿ. ನಮ್ಮ ಸಂಸ್ಕೃತಿ, ಧರ್ಮ ಹಾಗೂ ಪರಂಪರೆಯ ಉಳಿವಿಗೆ ಯುವಕರ ಪ್ರಯತ್ನ ಅಗತ್ಯವಿದೆ ಎಂದು ಪಾರಂಪರಿಕ ವೈದ್ಯ ಹಣಮಂತ ಮಳಲಿ ಹೇಳಿದರು.

ರೋಣ ಪಟ್ಟಣದ ಶರಣಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ದ್ರೋಣಪುರ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪೂರ್ವಿಕರ ಶ್ರಮ ಹಾಗೂ ಬಲಿದಾನದಿಂದ ಸನಾತನ ಹಿಂದೂ ಧರ್ಮವು ಇನ್ನೂ ಜೀವಂತವಿದೆ. ಅದರ ಪಾಲನೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ’ ಎಂದರು.

‘ಆರ್ಎಸ್ಎಸ್ ಜನ್ಮಶತಾಬ್ದಿಯ ನಿಮಿತ್ತ ಇಡೀ ದೇಶದಲ್ಲಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ದೇಶದಲ್ಲಿ 1.10 ಲಕ್ಷ ಹಿಂದೂ ಸಮ್ಮೇಳನಗಳನ್ನು ಮಾಡಲಾಗಿದೆ. 49 ವಿವಿಧ ದೇಶಗಳಲ್ಲಿ ಹಿಂದೂ ಸಮಾವೇಶ ಮಾಡಲಾಗಿದೆ. ಆದರೆ, ನಮ್ಮ ದೇಶದಲ್ಲೇ ಹಿಂದೂ ಸಮ್ಮೇಳನ ಮಾಡಲು ಮತ್ತೊಬ್ಬರ ಅನುಮತಿ ತೆಗೆದುಕೊಳ್ಳುವ ಅನಿವಾರ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಬೂದೀಶ್ವರ ಮಠದ ವಿಶ್ವನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದ್ರೋಣಪುರ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶಿವಣ್ಣ ಪಲ್ಲೇದ, ಉಪಾಧ್ಯಕ್ಷೆ ಲೀಲಾವತಿ ಚಿತ್ರಗಾರ, ಭರಮಗೌಡ ಲಿಂಗನಗೌಡ್ರ, ರವಿ ದಂಡಿನ, ಶೇಖಣ್ಣ ನವಲಗುಂದ, ನಿಂಗಪ್ಪ ನವಲಗುಂದ, ಐ.ಬಿ.ದಂಡಿನ, ಬಸವರಾಜ ಸಜ್ಜನರ, ವೀರೇಶ ದೊಡ್ಡಣ್ಣವರ, ವೀರೇಶ ಗದಗಿನ, ವಿಶ್ವನಾಥ ಬಾಳಿಕಾಯಿ, ರವಿ ಕೊಪ್ಪದ, ರಾಜು ಕುಲಕರ್ಣಿ, ಬಿ.ಎಮ್. ಪಾಟೀಲ, ವೀರೇಶ ಸಂಕನಗೌಡ್ರ ಇದ್ದರು.

ಸಮಾವೇಶದ ನಿಮಿತ್ತ ಯುವಕರಿಂದ ಸಿದ್ಧಾರೂಢ ಮಠದಿಂದ ರೋಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಮಧ್ಯಾಹ್ನ 2 ಕ್ಕೆ ಭವ್ಯ ಶೋಭಾಯಾತ್ರೆ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಿಂದ ಆರಂಭಗೊಂಡು ಪೋತರಾಜನಕಟ್ಟೆ, ಮುಲ್ಲಾನಬಾವಿ ವೃತ್ತ, ಸೂಡಿ ಕ್ರಾಸ್ ಮಾರ್ಗವಾಗಿ ಶರಣ ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ವೇದಿಕೆಯಲ್ಲಿ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.