ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಧಾನಿ ಕುಮ್ಮಕ್ಕು; ಎಚ್ಕೆ ಆರೋಪ

7

ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಧಾನಿ ಕುಮ್ಮಕ್ಕು; ಎಚ್ಕೆ ಆರೋಪ

Published:
Updated:
Prajavani

ಗದಗ:‘ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು ನೀಡುತ್ತಿದ್ದಾರೆ. ಇದಕ್ಕಾಗಿ ನಡೆಯುತ್ತಿರುವ ಕುದುರೆ ವ್ಯಾಪಾರದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಡಿಸಿಎಂ, ಮಾಜಿ ಗೃಹ ಸಚಿವ, ಕೇಂದ್ರ ಸಚಿವರು ಕೈಜೋಡಿಸಿದ್ದಾರೆ’ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮೈತ್ರಿ ಸರ್ಕಾರ ವಾಸ್ತವಕ್ಕೆ ಹತ್ತಿರ ಹಾಗೂ ಅನುಷ್ಠಾನ ಸಾಧ್ಯವಾದ ಯೋಜನೆಗಳನ್ನು ಮಾತ್ರ ಬಜೆಟ್‌ನಲ್ಲಿ ಘೋಷಿಸಿದೆಯೇ ಹೊರತು ಕೇಂದ್ರದಂತೆ ಲೋಕಸಭಾ ಚುನಾವಣಾ ಪ್ರಣಾಳಿಕೆ ನೀಡಿಲ್ಲ’ ಎಂದರು.

‘ರಾಜ್ಯದ ಬಜೆಟ್‍ನಲ್ಲಿ ಯಾವುದೇ ರಾಜಕೀಯ ಪ್ರೇರಿತ ಯೋಜನೆಗಳಿಲ್ಲ. ಕೇಂದ್ರದಂತೆ ರೈತರಿಗೆ ದಿನವೊಂದಕ್ಕೆ ₹3 ನೀಡುವಂತಹ ಹಾಸ್ಯಾಸ್ಪದ ಯೋಜನೆಗಳನ್ನೂ ಪ್ರಕಟಿಸಿಲ್ಲ.ಬಜೆಟ್‍ನಲ್ಲಿ ಸಿಂಹಪಾಲನ್ನು ರೈತರಿಗೆ ನೀಡಲಾಗಿದೆ’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗದುಗಿನ ಗಂಗಿಮಡಿಯಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳಿಗೆ ₹50 ಕೋಟಿ ವಿಶೇಷ ಅನುದಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ಅಶೋಕ ಮಂದಾಲಿ, ಸಾದಿಕ್ ನರಗುಂದ, ಪರಪ್ಪ ಬಂದಕ್ಕನವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !