ಇಂದಿರಾ ಕ್ಯಾಂಟೀನ್‌ಗೂ ಎರಡು ಬಾರಿ ಉದ್ಘಾಟನೆ ಭಾಗ್ಯ..!

7
ಸ್ಥಳೀಯ ವಿಶೇಷ ತಿನಿಸುಗಳಾದ ಪೂರಿ, ಬೆಟಗೇರಿ ಚಟ್ನಿ, ಸೂಸಲ ಕೂಡ ಲಭ್ಯ

ಇಂದಿರಾ ಕ್ಯಾಂಟೀನ್‌ಗೂ ಎರಡು ಬಾರಿ ಉದ್ಘಾಟನೆ ಭಾಗ್ಯ..!

Published:
Updated:
Deccan Herald

ಗದಗ:ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಲು ಕೆಲವೇ ನಿಮಿಷಗಳು ಬಾಕಿ ಇದ್ದಾಗ, ತರಾತುರಿಯಲ್ಲಿ ಉದ್ಘಾಟನೆಯಾಗಿದ್ದ ಇಲ್ಲಿನ ಬೆಟಗೇರಿ ಮಾರುಕಟ್ಟೆಯಲ್ಲಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ಶಾಸಕ ಎಚ್‌.ಕೆ ಪಾಟೀಲ ಅವರು ಶುಕ್ರವಾರ ಮತ್ತೊಮ್ಮೆ ಉದ್ಘಾಟಿಸಿದರು.

‘ಇಂದಿನ ದುಬಾರಿ ದಿನಗಳಲ್ಲಿ ಒಂದು ಕಪ್‌ ಚಹಾ ದರವೇ ₹10 ಇದೆ.ಆದರೆ, ಅದೇ ದರಲ್ಲಿ, ಇಂದಿರಾ ಕ್ಯಾಂಟೀನ್‌ನಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು. ಬೆಟಗೇರಿಯ ತರಕಾರಿ ಮಾರುಕಟ್ಟೆ ಬಳಿ ಈ ಕ್ಯಾಂಟೀನ್‌ ಸ್ಥಾಪನೆಯಾಗಿರುವುದರಿಂದ ಈ ಭಾಗದ ವರ್ತಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

‘ಬೆಟಗೇರಿಯ ಇಂದಿರಾ ಕ್ಯಾಂಟೀನ್‍ನಲ್ಲಿ ಸ್ಥಳೀಯ ಆಹಾರಗಳಿಗೆ ಆದ್ಯತೆ ನೀಡಲಾಗಿದೆ. ಈ ಭಾಗದ ಜನಪ್ರಿಯ ಪೂರಿ, ಬೆಟಗೇರಿ ಚಟ್ನಿ, ರೊಟ್ಟಿ, ಚಪಾತಿ, ಸೂಸಲಾ ಕೂಡ ಕ್ಯಾಂಟೀನ್‌ನಲ್ಲಿ ಲಭಿಸಲಿವೆ’ ಎಂದರು. ‘ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ನಗರಸಭೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಸೂಚಿಸಿದರು.’

ಬೆಟಗೇರಿಯಲ್ಲಿ ನಿರ್ಮಾಣಗೊಂಡ ಹೈಟೆಕ್‌ ತರಕಾರಿ ಮಾರುಕಟ್ಟೆಯನ್ನು ಅವರು ಉದ್ಘಾಟಿಸಿದರು. ನಂತರ ವ್ಯಾಪಾರಿಗಳಿಂದ ಬೆಂಡೆಕಾಯಿ, ಟೊಮೊಟೊ, ಕೋತಂಬರಿ ಸೊಪ್ಪು ಖರೀದಿಸಿದರು. ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ, ನಗರಸಭೆ ಅಧ್ಯಕ್ಷ ಸುರೇಶ್ ಕಟ್ಟಿಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ರುದ್ರೇಶ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !