ಮುಂಡರಗಿ: ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ 63 ಕಿ.ಮೀ. ಉದ್ದಕ್ಕೆ ಹಾಗೂ ಸುಮಾರು 33,000 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡವು ಉತ್ತರ ಕರ್ನಾಟಕದ ಮಹತ್ವದ ನೈಸರ್ಗಿಕ ಸಂಪತ್ತಾಗಿದ್ದು, ಶುದ್ಧ ಗಾಳಿ ಸೇರಿದಂತೆ ಹಲವು ಕಾರಣದಿಂದ ಅದು ಇಂದು ಖ್ಯಾತಿ ಪಡೆದಿದೆ.

ಅಪರೂಪದ ಸಸ್ಯ ಹಾಗೂ ವನ್ಯಜೀವಿ ಸಂಪತ್ತು, ಚಿನ್ನ, ಕಬ್ಬಿಣ ಮೊದಲಾದ ಖನಿಜ ಸಂಪತ್ತನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಕಪ್ಪತಗುಡ್ಡವು ಉತ್ತರ ಕರ್ನಾಟಕದ ಪ್ರಸಿದ್ದ ಪ್ರವಾಸಿ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿದಲ್ಲಿ ಅದು ಕರ್ನಾಟಕದ ಅತ್ಯುತ್ತಮ ಪ್ರವಾಸಿಕೇಂದ್ರ ಹಾಗೂ ಚಾರಣಪ್ರಿಯರ ನೆಚ್ಚಿನ ತಾಣವಾಗಲಿದೆ.

ಕಪ್ಪತಗುಡ್ಡದ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಏಷ್ಯಾದಲ್ಲಿಯೇ ತುಂಬಾ ಅಪರೂಪದ ಮತ್ತು ಅತ್ಯಮ್ಯೂಲ್ಯವಾದ ಆಯುರ್ವೇದ ಸಸ್ಯಗಳು ಹಾಗೂ ಗಿಡಮೂಲಿಕೆಗಳು ಬೆಳೆಯುತ್ತಿದ್ದು, ಜಗತ್ತಿನ ಹಲವು ಮಾರಣಾಂತಿಕ ಕಾಯಿಲೆಗಳಿಗೆ ರಾಮಬಾಣವಾಗಬಲ್ಲ ಔಷಧೀಯ ಸಸ್ಯಗಳು ಕಪ್ಪತಗುಡ್ಡದಲ್ಲಿವೆ. ಇಲ್ಲಿ ದೊರೆಯುವ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಮಹತ್ವವನ್ನು ಮುಂದಿನ ತಲೆಮಾರಿಗೆ ತಿಳಿಸುವ ಮತ್ತು ಉಳಿಸುವ ಉದ್ದೇಶದಿಂದ ಕಪ್ಪತಗುಡ್ಡದಲ್ಲಿ ಒಂದು ಆಯುರ್ವೇದ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಅಥವಾ ಆಯುರ್ವೇದ ವಿಶ್ವವಿದ್ಯಾಲಯ ತೆರೆಯಬೇಕು ಎನ್ನುವುದು ಪರಿಸರಪ್ರಿಯರು ಹಾಗೂ ಆಯುರ್ವೇದ ವೈದ್ಯರ ಬಹುದಿನಗಳ ಬೇಡಿಕೆಯಾಗಿದೆ.

ಸರ್ಕಾರ ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ ಸಂದರ್ಭದಲ್ಲಿ ಇಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ತೆರೆಯಬೇಕು ಎಂದು ಪರಿಸರಪ್ರೇಮಿಗಳು ಆಗ್ರಹಿಸಿದ್ದರು. ಆದರೆ ಅದು ಈವರೆಗೂ ಕಾರ್ಯರೂಪಕ್ಕೆ ಬಾರದಿರುವುದು ಇಲ್ಲಿಯ ಜನರಲ್ಲಿ ಅಸಮಾಧಾನ ಮೂಡಿಸಿದೆ.

ಸಾಕಷ್ಟು ಜನರಿಗೆ ಕಪ್ಪತಗುಡ್ಡದಲ್ಲಿ ದೊರೆಯುವ ಹಾಗೂ ಬೆಳೆಯುವ ಔಷಧೀಯ ಸಸ್ಯಗಳ ಮಾಹಿತಿಯಾಗಲಿ ಅವುಗಳ ಮಹತ್ವವಾಗಲಿ ತಿಳಿದಿಲ್ಲ. ವಿದೇಶಿಗರು ಹಾಗೂ ಅನ್ಯ ರಾಜ್ಯಗಳ ಆಯುರ್ವೇದ ತಜ್ಞರು, ಪಂಡಿತರು ಇಲ್ಲಿ ದೊರೆಯುವ ಅಪರೂಪದ ಔಷಧೀಯ ಸಸ್ಯಗಳ ಅಧ್ಯಯನಕ್ಕೆ ಆಗಾಗ ಬರುತ್ತಾರೆ ಮತ್ತು ಇಲ್ಲಿ ದೊರೆಯುವ ಔಷಧೀಯ ಸಸ್ಯಗಳನ್ನು ಕಂಡು ವಿಸ್ಮಯಗೊಳ್ಳುತ್ತಾರೆ.

‘ಕಪ್ಪತಗುಡ್ಡದಲ್ಲಿ ಸಂಭವಿಸುವ ಆಕಸ್ಮಿಕ ಬೆಂಕಿ ಅವಘಡಗಳು ಹಾಗೂ ಮತ್ತಿತರ ನೈಸರ್ಗಿಕ ಕಾರಣಗಳಿಂದ ಇಲ್ಲಿಯ ಅಪರೂಪದ ಔಷಧೀಯ ಸಸ್ಯಗಳು ನಾಶವಾಗುವ ಸಾಧ್ಯತೆ ಇದೆ. ಕಪ್ಪತಗುಡ್ಡದ ಗಿರಿಸಾಲಿನಲ್ಲಿ ಕಪ್ಪತ ಮಲ್ಲಿಕಾರ್ಜುನ, ಶಿಂಗಟಾಲೂರ ವೀರಭದ್ರೇಶ್ವರ, ನಂದಿವೇರಿ ಮಠ, ಸಂಜೀವಿನಿ ಹನುಮಪ್ಪ, ಮಜ್ಜಿಗೆ ಕೆರೆ ಬಸವಣ್ಣ ಹೀಗೆ ಹಲವಾರು ಧಾರ್ಮಿಕ ಕೇಂದ್ರಗಳಿವೆ. ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳು ತಮಗೆ ಅರಿವಿಲ್ಲದಂತೆ ಅಲ್ಲಿ ಬೆಳೆದಿರುವ ಗಿಡ, ಮರಗಳನ್ನು, ಸಸ್ಯ ಹಾಗೂ ಗಿಡ, ಮೂಲಿಕೆಗಳನ್ನು ಹಾಳು ಮಾಡುತ್ತಾರೆ. ಹೀಗಾಗಿ ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ’ ಎನ್ನುತ್ತಾರೆ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ.

ಕಪ್ಪತಗುಡ್ಡದ ಸೂಕ್ತ ಪ್ರದೇಶದಲ್ಲಿ ರಾಜ್ಯ ಸರ್ಕಾರ ಆಯುರ್ವೇದ ಅಧ್ಯ ಯನ ಹಾಗೂ ಆಯುರ್ವೇದ ಸಸ್ಯಗಳ ಸಂಶೋಧನಾ ಕೇಂದ್ರ ಅಥವಾ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಇಲ್ಲಿ ಬೆಳೆಯುವ ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಅನುಕೂಲವಾಗಲಿದೆ. ಜೊತೆಗೆ ವಿವಿಧ ಕಾಯಿಲೆಗಳಿಗೆ ಸುಲಭವಾಗಿ ಆಯುರ್ವೇದ ಔಷಧ ತಯಾರಿಸಲು ತಜ್ಞರಿಗೆ ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಸೂಕ್ತ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಅಲ್ಲಿ ಸಂಶೋಧಕ ರಿಗೆ ಅಳಿವಿನ ಅಂಚಿನಲ್ಲಿರುವ ಅಪರೂಪದ ಆಯುರ್ವೇದ ಸಸ್ಯಗಳ ಅಭಿ ವೃದ್ಧಿ ಹಾಗೂ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಕೇಂದ್ರವು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅವನತಿಯ ಹಂತದಲ್ಲಿರುವ ಔಷಧೀಯ ಸಸ್ಯಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಸರ್ಕಾರ ತೋಟಗಾರಿಕೆ ವಿಶ್ವವಿದ್ಯಾಲಯ ಆರಂಭಿಸಲು ಅಗತ್ಯ ಕ್ರಮ ಕೈಗೊಂಡಿದೆ. ಕಳೆದ ಬಜೆಟ್ನಲ್ಲಿ ಸರ್ಕಾರ ಅದಕ್ಕೆ ಅಗತ್ಯ ಅನುದಾನವನ್ನೂ ಮಂಜೂರು ಮಾಡಿದೆ. ಅದೇ ಮಾದರಿಯಲ್ಲಿ ಆಯುರ್ವೇದ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಅಥವಾ ಆಯುರ್ವೇದ ವಿವಿ ಆರಂಭಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.

ಆಯುರ್ವೇದ ಸಸ್ಯಗಳ ಆಗರ

ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಅಶ್ವಗಂಧ, ಭೃಂಗರಾಜ, ದೊಡ್ಡಪತ್ರೆ, ಹಿಪ್ಪಲಿ, ಮೋಡಿ, ಉಮ್ಮತ್ತಿ, ಹಾಡೆಬಳ್ಳಿ, ವಿಷ್ಣುಕಾಂತಿ, ಬ್ರಹ್ಮದಂಡೆ, ಶಿವನಿ, ಸರ್ಪಗಂಧ, ದತ್ತೂರಿ, ವಿಷಮಧಾರಿ, ಪುರುಷರತ್ನ, ಜಲಹಿಪ್ಪಲಿ, ಕಾಸರಕ, ತುಂಬೆ, ಕೋಳಿಕುಟುಕ, ಅಳಲೆಕಾಯಿ, ಅಂಟುವಾಳ, ಭಾರಂಗಿ, ನೆಲಗುಳ್ಳು, ಮಯೂರಶಿಖಿ, ದೇವದಾರು, ಯಡಮುರುಗಿ, ಬೆಲ್ಲಗಡಗ, ದೇವಗಣಗಲೆ, ಅಮೃತಬಳ್ಳಿ, ದೇವದಾಳಿ, ಹರಿದಹಚಗ, ಒಂದೆಲಗ, ಒಳಮುಚುಗ, ಹೊರಮುಚುಗ ಮೊದಲಾದ 375ಕ್ಕೂ ಹೆಚ್ಚು ಆಯುರ್ವೇದ ಔಷಧೀಯ ಸಸ್ಯಗಳು ಹಾಗೂ ಮೂಲಿಕೆಗಳು ಬೆಳೆಯುತ್ತಲಿವೆ.

ಅಲೋಪತಿ ಹಾಗೂ ಮತ್ತಿತರ ವೈದ್ಯ ಪದ್ಧತಿಯ ಔಷಧಗಳಿಗೆ ವಾಸಿಯಾಗದ ಹಲವಾರು ಕಾಯಿಲೆಗಳು ಇಲ್ಲಿ ದೊರೆಯುವ ಆಯುರ್ವೇದ ಸಸ್ಯಗಳಿಂದ ತಯಾರಿಸಿದ ಔಷಧಗಳಿಂದ ವಾಸಿಯಾಗುತ್ತಲಿವೆ. ಸಾಕಷ್ಟು ಜನರು ಗುಡ್ಡದಲ್ಲಿ ಬೆಳೆಯುವ ಸಸ್ಯಗಳನ್ನು ನೋಡಿರುತ್ತಾರೆ. ಆದರೆ, ಆ ಸಸ್ಯದ ಹೆಸರಾ ಗಲಿ ಅದರ ಮಹತ್ವವಾಗಲಿ ಅವರಿಗೆ ತಿಳಿದಿರುವುದಿಲ್ಲ ಎನ್ನುತ್ತಾರೆ ತಜ್ಞರು.

ಯಾರು, ಏನಂತಾರೆ?

ಸಸ್ಯ ಸಂರಕ್ಷಣೆಗೆ ಅನುಕೂಲ

ಕಪ್ಪತಗುಡ್ಡದಲ್ಲಿ ತುಂಬಾ ಅಪರೂಪದ ಔಷಧೀಯ ಸಸ್ಯಗಳು ಬೆಳೆಯುತ್ತಿದ್ದು, ನಮ್ಮ ಜನರಿಗೆ ಅವುಗಳ ಮಹತ್ವ ತಿಳಿಯದಾಗಿದೆ. ಇಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ಅಥವಾ ಆಯುರ್ವೇದ ವಿಶ್ವವಿದ್ಯಾಲಯ ಆರಂಭವಾದರೆ ಆಯುರ್ವೇದ ಸಸ್ಯಗಳ ಸಂರಕ್ಷಣೆ, ಸಂಶೋಧನೆ, ಸಂವರ್ಧನೆಗಳಿಗೆ ತುಂಬಾ ಅನುಕೂಲವಾಗುತ್ತದೆ.

ಶಿವಕುಮಾರ ಸ್ವಾಮೀಜಿ, ನಂದಿವೇರಿ ಮಠ, ಕಪ್ಪತಗುಡ್ಡ

ಸಂರಕ್ಷಣೆ ನಮ್ಮೆಲ್ಲರ ಹೊಣೆ

ಕಪ್ಪತಗುಡ್ಡದಲ್ಲಿ ನಮ್ಮ ಅರಿವಿಗೆ ಬಾರದಂತೆ ನಾವು ಸಾಕಷ್ಟು ಔಷಧೀಯ ಸಸ್ಯಗಳನ್ನು ನಾಶ ಮಾಡುತ್ತಿದ್ದೇವೆ. ಇದೇ ರೀತಿ ನಾವು ಸಸ್ಯ ಸಂಪತ್ತನ್ನು ನಾಶ ಮಾಡುತ್ತಾ ಹೋದರೆ ಮುಂದೊಂದು ದಿನ ನಮಗೆ ಅಪರೂಪದ ಔಷಧೀಯ ಸಸ್ಯಗಳು ದೊರೆಯದಂತಾಗುತ್ತವೆ. ಆಯುರ್ವೇದ ಸಸ್ಯ ಸಂಪತ್ತು ಸೇರಿದಂತೆ ಕಪ್ಪತಗುಡ್ಡದ ಸಂಪೂರ್ಣ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಸಿ.ಎಸ್.ಅರಸನಾಳ, ಜಿಲ್ಲಾ ವನ್ಯಜೀವಿ ಪರಿಪಾಲಕ, ಮುಂಡರಗಿ

ಸಸ್ಯ ಸಂಪತ್ತಿನ ಸದ್ಬಳಕೆಯಾಗಲಿ

ಅಪರೂಪದ ಆಯುರ್ವೇದ ಸಸ್ಯ ಸಂಪತ್ತನ್ನು ಒಳಗೊಂಡಿರುವ ಕಪ್ಪತಗುಡ್ಡದಂತಹ ಸಂಪದ್ಭರಿತ ಅರಣ್ಯ ಪ್ರದೇಶ ಬೇರೆಲ್ಲೂ ಇಲ್ಲ. ನಾವು ಅಲ್ಲಿರುವ ಸಸ್ಯ ಸಂಪತ್ತನ್ನು ಕಾಪಾಡಿಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆ ಅಪರೂಪದ ಸಸ್ಯ ಸಂಪತ್ತನ್ನು ಫೋಟೊಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಅಲ್ಲಿರುವ ಅದ್ಭುತ ಹಾಗೂ ಅಪರೂಪದ ಸಸ್ಯ ಸಂಪತ್ತನ್ಮು ನಾವು ಸದ್ಬಳಕೆ ಮಾಡಿಕೊಳ್ಳಬೇಕು.

ಮಂಜುನಾಥ ಇಟಗಿ, ಸಮಾಜಸೇವಕ, ಮುಂಡರಗಿ

ಜನರಲ್ಲಿ ಜಾಗೃತಿ ಮೂಡಿಸಿ

ಅಡ್ಡಪರಿಣಾಮಗಳಿಲ್ಲದ ಆಯುರ್ವೇದ ಸಸ್ಯಗಳು ಹಾಗೂ ಅವುಗಳಿಂದ ತಯಾರಿಸಿದ ಔಷಧಗಳ ಸೇವನೆ ಕುರಿತು ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಆಯುರ್ವೇದ ಸಂಶೋಧನಾ ಕೇಂದ್ರ ತೆರೆಯಬೇಕು.

ಮಂಜುಳಾ ಇಟಗಿ, ಸಂಚಾಲಕಿ, ಹಿಮಾಲಯ ಯೋಗ ತರಬೇತಿ ಕೇಂದ್ರ, ಮುಂಡರಗಿ

ಕಪ್ಪತಗುಡ್ಡ ರಕ್ಷಣೆಗೆ ಒತ್ತು

ಅರಣ್ಯ ಇಲಾಖೆಯ ಪರಿಶ್ರಮದಿಂದಾಗಿ ಇಂದು ಕಪ್ಪತಗುಡ್ಡವು ತುಂಬಾ ಸೊಗಸಾಗಿ ಬೆಳೆಯುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಪ್ರದೇಶದ ಮೇಲೆ ನಿರಂತರ ನಿಗಾ ವಹಿಸುತ್ತಿದ್ದಾರೆ.

ಜನರ ಬೇಡಿಕೆಯಂತೆ ಇಲ್ಲಿ ಆಯುರ್ವೇದ ಸಂಶೋಧನಾ ಕೇಂದ್ರ ತೆರೆದರೆ ಔಷಧೀಯ ಸಸ್ಯಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳು ಮನಸ್ಸು ಮಾಡಬೇಕು.

ಮಂಜುನಾಥ ಮೇಗಳಮನಿ, ವಲಯ ಅರಣ್ಯಾಧಿಕಾರಿ, ಕಪ್ಪತ ಹಿಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.