ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ತೊಟ್ಟಿಲು ತೂಗಿ ಹನುಮನ ಸ್ಮರಣೆ ಮಾಡಿದ ಹಿಂದೂ– ಮುಸ್ಲಿಮರು

Last Updated 16 ಏಪ್ರಿಲ್ 2022, 12:56 IST
ಅಕ್ಷರ ಗಾತ್ರ

ಡಂಬಳ (ಗದಗ ಜಿಲ್ಲೆ): ಸ್ಥಳೀಯ ಹನಮಂತ ದೇವಸ್ಥಾನದಲ್ಲಿ ಶನಿವಾರ ಹಿಂದೂ– ಮುಸ್ಲಿಂ ಸಮುದಾಯದವರು ಸೇರಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಿದರು.

ಹಿಂದೂ– ಮುಸ್ಲಿಂ ಮಹಿಳೆಯರು ತೊಟ್ಟಿಲು ತೂಗಿ ಭಕ್ತಿ ಸಮರ್ಪಿಸಿದರು. ಹನುಮನ ಸ್ಮರಣೆ ಮಾಡಿ ಭಾವೈಕ್ಯಮೆರೆದರು.

ಹನುಮ ಜಯಂತಿ ಅಂಗವಾಗಿ ದೇವಸ್ಥಾನವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದಿನವಿಡೀ ಪೂಜೆ, ಧ್ಯಾನದ ಮೂಲಕ ಹನುಮನ ಸ್ಮರಣೆ ನಡೆಯಿತು.

ಪಂಚಾಮೃತ, ಅಭಿಷೇಕ, ಮಹಾಮಂಗಳಾರತಿ, ನೈವೇದ್ಯ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ನೂರಾರು ಭಕ್ತರು ದೇವಾಲಯಕ್ಕೆ ತೆರಳಿ ಹನುಮನ ದರ್ಶನ ಪಡೆದರು. ಹರಕೆ ತೀರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT