‘ಒಂದು ಧರ್ಮದ ವಿರುದ್ಧ ಮಾತನಾಡುವುದು ಯಾವುದೇ ಮಾನವೀಯ ಧರ್ಮವಿಲ್ಲ. ಚಾಮುಂಡೇಶ್ವರಿ ಕಾಲ್ಪನಿಕ ಅಂತ ಹೇಳುತ್ತಾರೆ. ಚಾಮುಂಡೇಶ್ವರಿ ಕಾಲ್ಪನಿಕ ಎಂದರೆ, ಮಹಿಷಾಸುರನು ಕಾಲ್ಪನಿಕನಾ? ಮಹಿಷಾಸುರನ ಆರಾಧನೆ ಮಾಡುತ್ತಾರೆ. ಇಂತಹ ದ್ವಂದ್ವ ಹೇಳಿಕೆಗಳಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಯಾರೂ ಮಹತ್ವ ಕೊಟ್ಟಿಲ್ಲ; ಕೊಡಬಾರದು. ವಾಸ್ತವ ಅಂಶ ಗೊತ್ತಿದ್ದರೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.