ಕೆರೂರ: ಬನಶಂಕರಿ ದೇವಿ ಅವತರಿಸಿದ ದಿನದ ಅಂಗವಾಗಿ ಪಟ್ಟಣದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಭಕ್ತರು ದೇವಿಯ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ದೇವಸ್ಥಾನದಲ್ಲಿ ಬನಶಂಕರಿ ದೇವಿಗೆ ಮಾವಿನ ಹಣ್ಣಿನ ಅಭಿಷೇಕ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಮಾವಿನ ಹಣ್ಣಿನ ಶಿಕರಣಿ ಹಾಗೂ ಬುಂದೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸುಡು ಬಿಸಿಲು ಎನ್ನದೆ ಭಕ್ತರು ದೇವಿಯ ದರ್ಶನ ಪಡೆದು, ಪ್ರಸಾದದ ರುಚಿ ಸವಿದರು. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶಿವಾರ್ದ ಪಡೆದರು.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ದೇವಾಂಗಮಠದ ಮುದ್ದುಸಂಗ ಸ್ವಾಮೀಜಿ, ಅರ್ಚಕ ಯಂಕಣ್ಣ ಗುಡಿಸಾಗರ, ಶಿವಪ್ಪ ಹೆಬ್ಬಳ್ಳಿ, ಶಂಕ್ರಪ್ಪ ಗದಗಿನ, ರವಿ ಗದ್ದನಕೇರಿ, ಪುಂಡಲೀಕ ಕ್ವಾಣ್ಣೂರ, ಮಹೇಶ ಮುಗಳಿ, ಶರಣು ಶಜ್ಜನ, ಹನಮಂತ ಪ್ರಭಾಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-19-279795207

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.