ಕೆರೂರ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಉಪಾಹಾರ ಗೃಹವು ತಿಂಗಳಿಂದ ಬಂದ್ ಆಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಬಸ್ ನಿಲ್ದಾಣವು ಹುಬ್ಬಳ್ಳಿ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಲ್ಲಿರುವುದರಿಂದ ನಿತ್ಯ ನೂರಾರು ಬಸ್ಗಳು ಸಂಚರಿಸುತ್ತವೆ. ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಗೆ ಮುಖ್ಯ ಬಸ್ ನಿಲ್ದಾಣವಾಗಿದೆ.

ಒಂದು ತಿಂಗಳಿಂದ ಉಪಾಹಾರ ಗೃಹವು ಬಂದ್ ಆಗಿದ್ದು, ಇಲ್ಲಿ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಉಪಾಹಾರದ ತೊಂದರೆ ಉಂಟಾಗಿದೆ. ಉಪಾಹಾರ ಗೃಹವು ಮುಚ್ಚಿರುವುದರಿಂದ ಇಲಾಖೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಸ್ಥಳೀಯ ಬಸ್ ನಿಲ್ದಾಣದಿಂದ ನಿತ್ಯ ಹುಬ್ಬಳ್ಳಿ- ಬಾಗಲಕೋಟೆ, ಹುಬ್ಬಳ್ಳಿ- ವಿಜಯಪುರ, ಮೀರಜ್, ಬಾದಾಮಿಗೆ ಬಸ್ಗಳು ಸಂಚರಿಸುತ್ತವೆ. ನಿಲ್ದಾಣದ ಉಪಾಹಾರ ಗೃಹ ಬಂದ್ ಆಗಿರುವುದರಿಂದ ಬಸ್ ಚಾಲಕರು ಹಾಗೂ ಪ್ರಯಾಣಿಕರು ಹೊರಗಿನ ಹೋಟೆಲ್ ಗಳಿಗೆ ಹೋಗುವುದು ಅನಿವಾರ್ಯವಾಗಿದೆ.

ಉಪಾಹಾರ ಗೃಹಕ್ಕೆ ತಿಂಗಳಿಗೆ ₹77 ಸಾವಿರಕ್ಕೆ ಟೆಂಡರ್ ಆಗಿತ್ತು. ಈ ವರ್ಷದ ಟೆಂಡರ್ನಲ್ಲಿ ಮೊದಲಿದ್ದ ಬಾಡಿಗೆ ದರಕ್ಕಿಂತ ಹೆಚ್ಚಿನ ಬಾಡಿಗೆಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ನಲ್ಲಿ ಯಾರೂ ಭಾಗವಹಿಸಿದ್ದರಿಂದ ಉಪಾಹಾರ ಗೃಹ ಬಂದ್ ಆಗಿದೆ.

ಇಲಾಖೆಯ ಅಧಿಕಾರಿಗಳು ಕೇವಲ ಆದಾಯ ಮಾತ್ರ ನೋಡುತ್ತಿದ್ದಾರೆ. ಅವರಿಗೆ ಪ್ರಯಾಣಿಕರ ಸಂಕಟ ಮತ್ತು ಸಮಸ್ಯೆಗಳು ಕಾಣುತ್ತಿಲ್ಲ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದಲ್ಲಿನ ಮೂಲ ಸೌಕರ್ಯಗಳು ಕೂಡ ಮಾಯವಾಗಿವೆ. ಬೇಸಿಗೆ ಆರಂಭವಾಗಿರುವುದರಿಂದ ಜನರಿಗೆ ನೀರಿನ ಅವಶ್ಯಕತೆ ಇದೆ. ನಿಲ್ದಾಣದಲ್ಲಿ ಹಣ ನಿಡಿ ನೀರಿನ ಬಾಟಲ್ ತೆಗೆದುಕೊಂಡು ನೀರಿನ ದಾಹ ತೀರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಬೇಸಿಗೆ ಆರಂಭವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಬೇಗನೆ ಉಪಾಹಾರ ಗೃಹ ಆರಂಭಿಸಬೇಕು ಎಂದು ಪ್ರಯಾಣಿಕರು ಅಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-19-1091435107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.