ಕೆರೂರ: ‘ಶಾದಿ ಮಹಲ್ ಕಟ್ಟಡವು ಕೇವಲ ಬಾಡಿಗೆಗಾಗಿ ನಿರ್ಮಾಣವಾಗಬಾ ರದು. ನಾವು ನೀಡುವ ಅನುದಾನದಿಂದ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ಪಟ್ಟಣದ ಅಂಜುಮನ್ ಕಮಿಟಿಯವರು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪಟ್ಟಣದ ಕಿಲ್ಲಾ ಪೇಟೆಯಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಬೃಹತ್ ಶಾದಿ ಮಹಲ್ ಕಟ್ಟಡ ನಿರ್ಮಾಣವಾಗಲಿದ್ದು, ಸಮಾಜಕ್ಕೆ ಇದರ ಸದುಪಯೋಗವಾಗಲಿ’ ಎಂದು ಹೇಳಿದರು

‘ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ₹ 40 ಕೋಟಿ ಅನುದಾನ ನೀಡಿದ್ದು, ಇದರಲ್ಲಿ ಹೆಚ್ಚಿನ ಒತ್ತು ಶಿಕ್ಷಣಕ್ಕೆ ನೀಡಿದ್ದೇನೆ. ಅಲ್ಪಸಂಖ್ಯಾತರ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಕಲಿತರೆ, ಇಂತಹ ನೂರಾರು ಶಾದಿಮಹಲ್ ಕಟ್ಟಡ ವನ್ನು ಕಟ್ಟುವ ಶಕ್ತಿ ಅವರಲ್ಲಿ ಇರುತ್ತದೆ’ ಎಂದು ಹೇಳಿದರು.

ಅಂಜುಮನ್ ಕಮೀಟಿಯ ಕಾರ್ಯದರ್ಶಿ ಉಮರ್ ಫಾರೂಕ ಪೆಂಡಾರಿ ಮಾತನಾಡಿ, ‘ಸುಮಾರು ವರ್ಷಗಳಿಂದ ಕನಸಾಗಿ ಉಳಿದಿದ್ದ ಶಾದಿಮಹಲ್ ಕಟ್ಟಡವು ಇಂದು ಶಾಸಕರ ಸತತ ಪ್ರಯತ್ನದಿಂದ ನನಸಾಗಿದೆ, ಸಮುದಾಯದವರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಆದಷ್ಟು ಬೇಗ ಕಟ್ಟಡವನ್ನು ಪೂರ್ಣಗೊಳಿಸಿ ಶಾಸಕರಿಂದ ಉದ್ಘಾಟಿಸೋಣ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಜುಮನ್ ಕಮೀಟಿ ಅಧ್ಯಕ್ಷ ಮೋದಿನಸಾಬ್ ದೊಡಕಟ್ಟಿ, ಉಪಾಧ್ಯಕ್ಷ ಇಸ್ಮಾಯಿಲ್ ಮುಲ್ಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಂ.ಜಿ.ಕಿತ್ತಲಿ, ಉಸ್ಮಾನ ಅತ್ತಾರ, ಉಸ್ಮಾನ ಮುಲ್ಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಪ.ಪಂ.ಎಂಜಿನಿಯರ್ ಎಂ.ಐ.ಹೊಸಮನಿ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-19-527973011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.