3

ಜುಲೈನಲ್ಲಿ ಖೊಟ್ಟಿಪೈಸೆ ಚಿತ್ರ ಬಿಡುಗಡೆ

Published:
Updated:
ಕಿರಣ್‌ ಆರ್‌.ಕೆ

ಗದಗ:‘ಕಲಾವಿದ ರಾಮ ಚೇತನ್ ಹಾಗೂ ವೈಜನಾಥ ಬಿರಾದಾರ ಅಭಿನಯದ ‘ಖೊಟ್ಟಿ ಪೈಸೆ’ ಚಲಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ’ ಎಂದು ನಿರ್ದೇಶಕ ಕಿರಣ್‌ ಆರ್‌.ಕೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಉತ್ತರ ಕರ್ನಾಟಕದ ಭಾಷೆ, ಜನಜೀವನ ಆಧರಿಸಿ ಸಿನೆಮಾ ನಿರ್ಮಿಸಲಾಗಿದೆ. ಚಲಾವಣೆಯಲ್ಲಿ ಇಲ್ಲದ ನಾಣ್ಯ ಹಾಗೂ ಮನುಷ್ಯ ಸತ್ತ ಮೇಲೆ ಇರುವ ಬೆಲೆ ಎಷ್ಟು ಎನ್ನುವುದನ್ನು ಹೇಳಲು ಚಿತ್ರದಲ್ಲಿ ಪ್ರಯತ್ನಿಸಲಾಗಿದೆ’ ಎಂದರು.

‘ನಾಯಕ ಮತ್ತು ನಾಯಕಿ ಹೊರತುಪಡಿಸಿ ಉಳಿದ ಕಲಾವಿದರು ಉತ್ತರ ಕರ್ನಾಟಕದವರು. ಚಿತ್ರೀಕರಣ ಈ ಭಾಗದಲ್ಲೇ ನಡೆದಿದೆ. ಗಿರಿಜಾ ಕುಮಾರ್ ಚಿತ್ರದ ನಿರ್ಮಾಪಕರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !