ಮುಂಡರಗಿ: ‘ಈಚಿನ ವರ್ಷಗಳಲ್ಲಿ ಜಾತಿ ವ್ಯಾಮೋಹ ಎಲ್ಲರಲ್ಲಿ ಹೆಚ್ಚುತ್ತಿದೆ. ಜಾತಿ ಹಾಗೂ ಧರ್ಮಗಳ ಹೆಸರಿನಲ್ಲಿ ನಾವೆಲ್ಲ ಸಂಕುಚಿತರಾಗುತ್ತಿದ್ದೇವೆ. ಸಮಾಜವನ್ನು ಒಗ್ಗೂಡಿಸುವ ನೆಪದಲ್ಲಿ ದೇವರು ಹಾಗೂ ಮಹಾತ್ಮರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ದುರ್ದೈವದ ಸಂಗತಿ’ ಎಂದು ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ವಿಷಾದ ವ್ಯಕ್ತ ಪಡಿಸಿದರು.

ತಾಲ್ಲೂಕು ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘವು ಸೋಮವಾರ ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲ ಜಾತಿಗಳಲ್ಲಿ ಬಡವರಿದ್ದಾರೆ. ಎಲ್ಲ ಜನತೆಗೂ ಸೌಲಭ್ಯ ದೊರೆಯಬೇಕು. ಈ ನಿಟ್ಟಿನಲ್ಲಿ ಜಂಗಮಾಭಿವೃದ್ಧಿ ಸಂಘವು ಕೈಗೊಳ್ಳುವ ಸಮಾಜಪರ ಕಾರ್ಯಗಳಿಗೆ ₹ 25 ಲಕ್ಷ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ಮಹಾತ್ಮರ ಜಯಂತಿಗಳು ಕೇವಲ ಉತ್ಸವಗಳಿಗೆ ಮಾತ್ರ ಸೀಮಿತವಾಗಬಾರದು. ಅವರು ಸಾರಿರುವ ತತ್ವಾದರ್ಶಗಳನ್ನು ನಾವೆಲ್ಲ ಆಚರಿಸಬೇಕು. ಆ ಮೂಲಕ ಅವರ ಜಯಂತಿಯನ್ನು ಸಾರ್ಥಕ ಪಡಿಸಬೇಕು’ ಎಂದು ಸಲಹೆ ನೀಡಿದರು.

ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಜೆ. ಹಿರೇಮಠ ಅದ್ಯಕ್ಷತೆ ವಹಿಸಿದ್ದರು. ಮೈಸೂರಿನ ಸುಜ್ಞಾನದೇವ ಶಿವಾಚಾರ್ಯರು, ಹಂಪಸಾಗರದ ರುದ್ರಮುನಿ ಶಿವಲಿಂಗ ಶಿವಾಚಾರ್ಯರು ಮಾತನಾಡಿದರು. ಅನ್ನದಾನಿ ಹಿರೇಮಠ ಹಾಗೂ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರನ್ನು ಸನ್ಮಾನಿಸಲಾಯಿತು.

ಸರಸ್ವತಿ ಸ್ವಾಗತಿಸಿದರು. ವಿನಯ ಗಂಧದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಹಂಪಿಮಠ ಕಾರ್ಯಕ್ರಮ ನಿರೂಪಿಸಿದರು. ಕಲಕೇರಿ-ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು, ಅಭಿನವ ಮುದುಕೇಶ್ವರ ಶಿವಾಚಾರ್ಯರು, ಕುಮಾರಸ್ವಾಮಿ ಹಿರೇಮಠ ಇದ್ದರು.

ವೀರಶೈವ ತರಬೇತಿ ಕೇಂದ್ರ ಸ್ಥಾಪನೆ ಜಂಗಮರ ಮಕ್ಕಳಿಗೆ ವೀರಶೈವ ತತ್ವಾದರ್ಶ ಹಾಗೂ ವೀರಶೈವ ಧರ್ಮದ ಸಂಸ್ಕಾರ ಆಚಾರ ವಿಚಾರ ಮೊದಲಾದವುಗಳನ್ನು ಕಲಿಸಲು ಅನ್ನದಾನೀಶ್ವರ ಮಠದಲ್ಲಿ ವೀರಶೈವ ತರಬೇತಿ ಕೇಂದ್ರ ತೆರೆಯಲಾಗುವುದು. ಆಸಕ್ತ ಮಕ್ಕಳಿಗೆ ಮಠದಲ್ಲಿ ಉಚಿತ ಪ್ರಸಾದ ಹಾಗೂ ವಸತಿ ಕಲ್ಪಿಸಲಾಗುವುದು ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.