ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಾನೂರಿನಲ್ಲಿ ಮೂಲ ಸೌಲಭ್ಯಗಳ ಕೊರತೆ

Published 13 ಸೆಪ್ಟೆಂಬರ್ 2023, 4:52 IST
Last Updated 13 ಸೆಪ್ಟೆಂಬರ್ 2023, 4:52 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಡಗಾನೂರ ಗ್ರಾಮದಲ್ಲಿ ಜಲಜೀವನ ಮಿಷನ್‌ (ಜೆಜೆಎಂ) ಕಾಮಗಾರಿಯಿಂದಾಗಿ ಗ್ರಾಮದ ಸಿಸಿ ರಸ್ತೆಗಳು ಹಾಳಾಗಿದ್ದು, ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಸ್ವಚ್ಛತೆ ಇಲ್ಲದಂತಾಗಿದೆ.

ಗ್ರಾಮದ ಖಾಲಿ ನಿವೇಶನ, ಜಾಗಗಳಲ್ಲಿ ಗಿಡ-ಗಂಟೆಗಳು ಬೆಳೆದಿವೆ. ಇದರಿಂದಾಗಿ ವಿಷಜಂತುಗಳ ಕಾಟ ಹೆಚ್ಚಾಗಿದೆ. ಗ್ರಾಮದಲ್ಲಿನ ಕೊಳವೆಗಳಿಗೆ ನಲ್ಲಿಗಳು ಇಲ್ಲದೆ ನಿರಂತರವಾಗಿ ನೀರು ಪೋಲಾಗುತ್ತಿದೆ.
ಗ್ರಾಮದಲ್ಲಿ ಜನರು ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿರುವುದರಿಂದ ಚರಂಡಿಗಳು ಭರ್ತಿಯಾಗಿ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದು ಸಾಮಾನ್ಯವಾಗಿದೆ.

ಗ್ರಾಮದ ಅಂಗನವಾಡಿಯಿಂದ ರಾಜೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆವರೆಗೆ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದ ಕಮಲಪ್ಪ ಮಾಳೋತ್ತರ ಅವರ ಮನೆಯಿಂದ ಕಮಲಪ್ಪ ರಾಠೋಡ ಅವರ ಮನೆವರೆಗೆ ನಡುವಿನ ಮುಖ್ಯ ಚರಂಡಿಯಲ್ಲಿ ಗಿಡ-ಗಂಟಿಗಳು ಬೆಳೆದು ದುರ್ನಾತ ಹರಡಿದೆ. ಗ್ರಾಮದ ಸೇವಾಲಾಲ ಸಮುದಾಯ ಭವನದ ಹತ್ತಿರ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಜನರಿಗೆ ಶುದ್ಧ ಕುಡಿಯುವ ನೀರು ಲಭಿಸುತ್ತಿಲ್ಲ.

ಗಜೇಂದ್ರಗಡ ಸಮೀಪದ ಕೊಡಗಾನೂರ ಗ್ರಾಮದ ಮಖ್ಯ ಚರಂಡಿಯಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿರುವುದು
ಗಜೇಂದ್ರಗಡ ಸಮೀಪದ ಕೊಡಗಾನೂರ ಗ್ರಾಮದ ಮಖ್ಯ ಚರಂಡಿಯಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿರುವುದು
ನಿರ್ಮಲಾ ಕಲ್ಲಪ್ಪ ಸೊಲಬಗೌಡ್ರ ಗ್ರಾಮ ಪಂಚಾಯ್ತಿ ಸದಸ್ಯೆ.
ನಿರ್ಮಲಾ ಕಲ್ಲಪ್ಪ ಸೊಲಬಗೌಡ್ರ ಗ್ರಾಮ ಪಂಚಾಯ್ತಿ ಸದಸ್ಯೆ.

ಗ್ರಾಮದ ಮುಖ್ಯ ಚರಂಡಿಯನ್ನು 2 ತಿಂಗಳ ಹಿಂದೆ ಸ್ವಚ್ಛ ಮಾಡಿಸಲಾಗಿದೆ. ಅಲ್ಲದೆ ಶಿವಪ್ಪ ತಳವಾರ ಮನೆಯಿಂದ ಈರಯ್ಯ ಬಾಳಿಕಾಯಿ ಅವರ ಮನೆವರೆಗೆ ₹1 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣಕ್ಕೆ ಅಂದಾಜು ಪ್ರತಿ ತಯಾರಿಸಲಾಗಿದೆ

-ನಿರ್ಮಲಾ ಕಲ್ಲಪ್ಪ ಸೊಲಬಗೌಡ್ರ ಗ್ರಾಪಂ ಸದಸ್ಯೆ

ಕೊಡಗಾನೂರ ಗ್ರಾಮದಲ್ಲಿ ಈಗಾಗಲೇ ಚರಂಡಿಗಳನ್ನು ಸ್ವಚ್ಛತೆ ಮಾಡಿಸಲಾಗಿದೆ. ನೀರು ನಿರ್ವಹಣೆ ಯೋಜನೆ ಅಡಿಯಲ್ಲಿ ಮುಖ್ಯ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು

-ಎಸ್.ಎಸ್.ಕಡಬಲಕಟ್ಟಿ ಪಿಡಿಓ ರಾಮಾಪುರ ಗ್ರಾಪಂ

ಹೊಸ ಬಡಾವಣೆಗಳಲ್ಲಿ ಬವಣೆ

ಗ್ರಾಮದ ಶಿವಾಜಿ ಪ್ಲಾಟ್‌ ನ ಹೊಸ ಬಡಾವಣೆಯಲ್ಲಿ ಚರಂಡಿ ಕುಡಿಯುವ ನೀರಿನ ಪೈಪ್‌ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹೀಗಾಗಿ ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಈ ಬಡಾವಣೆಯಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಮನೆಗಳಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಆದರೆ ಈ ವರೆಗೂ ಬಡಾವಣೆಯಲ್ಲಿ ಸಿಸಿ ರಸ್ತೆ ಬೀದಿ ದೀಪ ಸೌಲಭ್ಯ ಕಲ್ಪಿಸಿಲ್ಲ. ರಾತ್ರಿ ಸಮಯದಲ್ಲಿ ವಿಷಜಂತುಗಳ ಹಾವಳಿಯಿಂದ ಅಲ್ಲಿನ ಜನರು ಜೀವ ಭಯದಲ್ಲಿ ವಾಸ ಮಾಡುತ್ತಿದ್ದಾರೆ.

ಆರಂಭವಾಗದ ಕಾಮಗಾರಿ

ಗ್ರಾಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ನಿರ್ಮಾಣಕ್ಕೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಂದಾಜು ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಟೆಂಡರ್‌ ಮಾಡಲಾಗಿದೆ. ಆಕಟ್ಟಡ ಕಾಮಗಾರಿ ಇವರೆಗೂ ಆರಂಭವಾಗಿಲ್ಲ. ಹಳೇ ಕಟ್ಟಡವು ಶಿಥಿಲವಾಗಿ ಬೀಳುವ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT