ಲಕ್ಷ್ಮೇಶ್ವರ: 10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳುವ ಪಟ್ಟಣದಲ್ಲಿನ ಪುರಾತನ ಸೋಮೇಶ್ವರ ದೇವಸ್ಥಾನವು ಲಕ್ಷ್ಮೇಶ್ವರದ ಹೆಸರನ್ನು ಇತಿಹಾಸದಲ್ಲಿ ಉಳಿಯುವಂತೆ ಮಾಡಿದೆ. ಈ ಸೋಮೇಶ್ವರ ದೇವರ ಜಾತ್ರಾ ಮಹೋತ್ಸವ ಏ.26ರಿಂದ 28ರವರೆಗೆ ನಡೆಯಲಿದೆ. ಏ.26ರಂದು ಸಂಜೆ 5ಕ್ಕೆ ರಥೋತ್ಸವ, 27ರಂದು ಸಂಜೆ ಕಡುಬಿನ ಕಾಳಗ ನಡೆಯಲಿದೆ.

ಸೋಮೇಶ್ವರ ದೇವಸ್ಥಾನ ಚಾಲುಕ್ಯ ಶಿಲ್ಪಕಲೆಯ ಶ್ರೀಮಂತ ವೈಭವದ ಪರಂಪರೆಯಲ್ಲಿದೆ. ಈಗಿನ ಲಕ್ಷ್ಮೇಶ್ವರಕ್ಕೆ ಹಿಂದೆ ಪುಲಿಗೆರೆ-300 ಎಂದು ಕರೆಯುತ್ತಿದ್ದರು. ಅಂದರೆ ಆಗ ಇದು 300 ಪ್ರಾಂತ್ಯಗಳ ಸೀಮೆಯಾಗಿತ್ತು. ಪ್ರಸ್ತುತ ದೇವಾಲಯ ಭವ್ಯವಾದ ಬಯಲಿನಲ್ಲಿ ನಿರ್ಮಿಸಲ್ಪಟ್ಟಿದ್ದು ದೇವಾಲಯದ ಸುತ್ತಲೂ ಕಲ್ಲಿನಿಂದ ನಿರ್ಮಿಸಿದ ಎತ್ತರವಾದ ಗೋಡೆ ಇದ್ದು, ದೇವಸ್ಥಾನಕ್ಕೆ ರಕ್ಷಣೆ ಒದಗಿಸಿದೆ.

ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಿಂದ ದೇವಾಲಯದೊಳಗೆ ಪ್ರವೇಶಿಸಲು ಮುಖ್ಯ ಮೂರು ದ್ವಾರಗಳಿವೆ.

ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿರುವ ಮೂರ್ತಿ ಅಪರೂಪ ಮತ್ತು ಸುಂದರವಾದದ್ದು. ಇಲ್ಲಿ ಪರಮೇಶ್ವರನ ಹಿಂದೆ ಪಾರ್ವತಿ ನಂದಿಯನ್ನೇರಿ ಕುಳಿತಿದ್ದಾಳೆ. ಸೋಮನಾಥ ಮೂರ್ತಿಯು ಸುಮಾರು 4 ಅಡಿ ಎತ್ತರ 3 ಅಡಿ ಅಗಲವಿದೆ. ಈ ಮೂರ್ತಿಯನ್ನು ಶಿವಶರಣ ಆದಯ್ಯನು ಸೌರಾಷ್ಟ್ರದಿಂದ ತಂದು ಸ್ಥಾಪಿಸಿದನೆಂದು ದಾಖಲೆಗಳಲ್ಲಿ ಉಲ್ಲೇಖ ಇದೆ. 21 ಎಕರೆ ವಿಸ್ತಿರ್ಣದಲ್ಲಿರುವ ದೇವಸ್ಥಾನದಲ್ಲಿ ಸೋಮತೀರ್ಥ, ಓಕುಳಿ ಹೊಂಡ ಸೇರಿದಂತೆ ಅನೇಕ ಚಿಕ್ಕ ಪುಟ್ಟ ದೇವಾಲಯಗಳು ಇವೆ. ಅವೆಲ್ಲವೂ ಅವಸಾನದ ಅಂಚಿಗೆ ತಲುಪಿದ್ದವು, ಆದರೆ ಇದೀಗ ಹೊಸ ಕಳೆಯೊಂದಿಗೆ ಭಕ್ತರನ್ನು ಆಕರ್ಷಿಸುತ್ತಿವೆ. ಕಲ್ಲಿನಿಂದಲೆ ನಿರ್ಮಿಸಿದ ಬೃಹತ ಬಾವಿ ಇದೀಗ ದುರಸ್ತಿಗೊಂಡಿದ್ದು ಅದರ ಸುತ್ತಲೂ ಉದ್ಯಾನ ನಿರ್ಮಿಸಲಾಗಿದೆ.

ದೇವಸ್ಥಾನದ ವಾಸ್ತುಶಿಲ್ಪವು ನಕ್ಷತ್ರಾಕಾರದಲ್ಲಿ ಇದ್ದು, ದೇವಾಲಯದ ಚಾವಣಿಯಲ್ಲಿ ಭೈರವಿ, ಶಿವ, ವಿಷ್ಣು, ಶಕ್ತಿ, ನಟರಾಜ ಗಣೇಶ, ವೀರಭದ್ರ, ವೇಣುಗೋಪಾಲರ ಶಿಲ್ಪಗಳನ್ನು ಅಲ್ಲಲ್ಲಿ ಕೆತ್ತಲಾಗಿದೆ. ಶಿಖರದ ದಕ್ಷಿಣ ಭಾಗದಲ್ಲಿ ಬ್ರಹ್ಮ, ಯಕ್ಷರನ್ನು, ಪಶ್ಚಿಮ ಭಾಗದಲ್ಲಿ ಶಕ್ತಿ-ಸರಸ್ವತಿಯರನ್ನು, ಉತ್ತರದಲ್ಲಿ ಶಿವನ ಮೂರ್ತಿಗಳು ಕಂಡು ಬರುತ್ತವೆ

ಶಿಲ್ಪಿ ಜಕಣಾಚಾರಿ ದೇವಾಲಯವನ್ನು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ. ಉತ್ತರ ದಿಕ್ಕಿನಿಂದ ದೇವಾಲಯ ಪ್ರವೇಶಿಸುವ ಭಕ್ತರಿಗೆ ಓಕುಳಿಹೊಂಡ ನಂತರ ಪೂರ್ವಾಭಿಮುಖವಾಗಿರುವ ಗಜಾನನ ದರ್ಶನವಾಗಿ ಒಳಗಡೆ ಕಾಲಿಟ್ಟ ತಕ್ಷಣ ಭವ್ಯ ಕಲಾಕೃತಿಯ ದೇವಸ್ಥಾನದ ಮಂಟಪ ಕಣ್ಣಿಗೆ ಬೀಳುತ್ತದೆ. ಮಹಾನವಮಿ ಹಾಗೂ ವಿಜಯದಶಮಿ ಹಬ್ಬದಲ್ಲಿ ಸರ್ವ ಸಮಾಜದ ದೇವರುಗಳು ಹಾಗೂ ಪಾಲಕಿ ಉತ್ಸವಗಳು ಸಮ್ಮಿಲತಗೊಂಡು ಮಧ್ಯರಾತ್ರಿ ಸೋಮನಾಥ ದೇವರ ನುಡಿ ಮುತ್ತುಗಳ ಕಾರ್ಣಿಕ ಪ್ರತಿವರ್ಷ ಜರುಗುತ್ತದೆ.

ಇನ್ಫೋಸಿಸ್ನಿಂದ ದೇವಸ್ಥಾನ ಜೀರ್ಣೋದ್ಧಾರ

ಶಿಥಿಲಗೊಂಡಿದ್ದ ಸೋಮೇಶ್ವರನ ದೇವಸ್ಥಾನವನ್ನು ಇನ್ಫೋಸಿಸ್ನ ಡಾ.ಸುಧಾ ಮೂರ್ತಿ ಅವರು 2014ರಲ್ಲಿ ₹5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ. ಅಂದಿನಿಂದ ಪ್ರತಿವರ್ಷ ಇನ್ಫೋಸಿಸ್ ವತಿಯಿಂದ ಪುಲಿಗೆರೆ ಉತ್ಸವ ಆಚರಿಸಲಾಗುತ್ತದೆ.

ಸೋಮನಾಥನಿಗೆ ಸೂರ್ಯಕಿರಣ ಸ್ಪರ್ಶ

ಪ್ರತಿವರ್ಷ ವೈಶಾಖ ಕೃಷ್ಣ ಪಕ್ಷದ ಶುಭ ದಿನದಂದು ಸೂರ್ಯೋದಯದ ಹೊಂಬಣ್ಣದ ಕಿರಣಗಳು ನೇರವಾಗಿ ಪೂರ್ವಾಭಿಮುಖವಾಗಿರುವ ಸೋಮನಾಥನ ಮೇಲೆ ಬೀಳುವುದು ಇಲ್ಲಿನ ವಿಶೇಷ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಸಂದರ್ಭದಲ್ಲಿ ಈ ಅದ್ಭುತ ಜರುಗುತ್ತದೆ. ಮೇ 25ರಿಂದ 30ರವರೆಗೂ ನಿತ್ಯ ಬೆಳಿಗ್ಗೆ 5.58ಕ್ಕೆ ಸೂರ್ಯನ ನೇರ ಕಿರಣಗಳು ಬೀಳುವ ಸುಂದರ ದೃಶ್ಯವನ್ನು ಈಗಲೂ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.