ಲಕ್ಕುಂಡಿ: ಇಲ್ಲಿಯ ಅಲ್ಲಮ ಪ್ರಭುದೇವರ ಮಠದ 38 ವರ್ಷಗಳ ಮೌನ ತಪಸ್ವಿ ಬಸವರಾಜೇಂದ್ರ ಸ್ವಾಮೀಜಿಯವರ 14ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏ.14ರಂದು ಸಂಜೆ 4.45ಕ್ಕೆ ರಥೋತ್ಸವ ನೆರವೇರಲಿದೆ.

ಮಠದ ಸಿದ್ಧಲಿಂಗೇಶ್ವರ ಶ್ರೀಗಳ ನೇತೃತ್ವದಲ್ಲಿ ಹೊಸರಿತ್ತಿಯ ಗುದ್ಧಲೀಶ್ವರ ಮಠದ ಗುದ್ಧಲೀಶ್ವರ ಸ್ವಾಮೀಜಿ, ಹರ್ಲಾಪುರದ ಕೊಟ್ಟೂರೇಶ್ವರ ಶ್ರೀಗಳು, ನೀಲ ಗುಂದದ ಗುಡ್ಡದ ಸುಕ್ಷೇತ್ರದ ಚನ್ನಬಸವ ಶಿವಯೋಗಿಗಳು ರಥೋತ್ಸವಕ್ಕೆ ಚಾಲನೆ ನೀಡುವರು. ರಥೋತ್ಸವದಲ್ಲಿ ನಾಡಿನ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ.

ಇದಕ್ಕೂ ಪೂರ್ವ ಬೆಳಿಗ್ಗೆ ಅಲ್ಲಮಪ್ರಭುದೇವರ ಗದ್ದುಗೆ ಹಾಗೂ ಬಸವರಾಜೇಂದ್ರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಜರುಗಲಿದೆ. ನಂತರ 11.45ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿವೆ. ಏ.15ರಂದು ಲಘು ರಥೋತ್ಸವ ನಡೆಯಲಿದೆ.

ಏ.13ರಂದು ಬೆಳಿಗ್ಗೆ ಪೂರ್ಣ ಕುಂಭ ಮೇಳ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಜರುಗಲಿದೆ.

ಸಂಜೆ 7ಕ್ಕೆ ಶಿವಶರಣೆ ಇಟಗಿ ಭೀಮಾಂಬಿಕಾ ದೇವಿ ಪುರಾಣವನ್ನು ಪ್ರವಚನಕಾರ ಕೊಟ್ರಯ್ಯಶಾಸ್ರ್ತೀಗಳು ನರಗುಂದಮಠ ಅವರು ಮುಕ್ತಾಯಗೊಳಿಸುವರು. ಅಂದಪ್ಪ ಮೆಣಸಿನಕಾಯಿ ಹಾಗೂ ಮಲ್ಲೇಶಕುಮಾರ ಅವರು ಸಂಗೀತ ಸೇವೆ ನೀಡುವರು. ಪ್ರತಿದಿನ ಅನ್ನ ಸಂತರ್ಪಣೆ ಇರಲಿದೆ ಎಂದು ಅಲ್ಲಮಪ್ರಭುದೇವರ ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-23-1981418503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.