ಲಕ್ಕುಂಡಿ: ಜಿಲ್ಲೆಯಲ್ಲಿಯೇ ದೊಡ್ಡ ಪಂಚಾಯಿತಿಯಾಗಿರುವ ಲಕ್ಕುಂಡಿ ಗ್ರಾಮ ಪಂಚಾಯಿತಿಗೆ ಈಗಿರುವ 30 ಸ್ಥಾನಗಳಿಂದ 35 ಸ್ಥಾನಕ್ಕೆ ಹೆಚ್ಚಿಸಬೇಕು ಎಂದು ಗದಗ ಜಿಲ್ಲಾ ವಿಭಾಗ ಮಟ್ಟದ ಎಸ್.ಸಿ. ಎಸ್.ಟಿ ದೌರ್ಜನ್ಯ ನಿಯಂತ್ರಣ ಜಾಗೃತಿ ಮೇಲುಸ್ತುವಾರಿ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ ಒತ್ತಾಯಿಸಿದ್ದಾರೆ.

ಈ ಕುರಿತು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯ ಸ್ಥಾನಗಳ ಪ್ರಕರಣ5(1) ರಂತೆ ನಿಗದಿಪಡಿಸಿ ಹೊರಡಿಸಲಾದ ಕರಡು ಪ್ರಕಟಣೆಗೆ ಆಕ್ಷೇಪಣಿ ಸಲ್ಲಿಸಿದ್ದಾರೆ.

ಲಕ್ಕುಂಡಿ ಗ್ರಾಮ ಪಂಚಾಯಿತಿ ಸೀಮಾ ನಿರ್ಣಯವು ಚುನಾಯಿತ ಸದಸ್ಯ ಸ್ಥಾನಗಳ ಕರಡು ಪ್ರಕಟಣೆ ಅವೈಜ್ಞಾನಿಕವಾಗಿದೆ. ಲಕ್ಕುಂಡಿ ಗ್ರಾಮವು ಗದಗ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿ ಆಗಿದ್ದು ಸುಮಾರು 25 ಸಾವಿರ ಜನಸಂಖ್ಯೆ ಹಾಗೂ ವಿಸ್ತಾರ ಹೊಂದಿದೆ. 10 ಸಾವಿರಕ್ಕೂ ಅಧಿಕ ಮತದಾರರಿದ್ದು ಮೊದಲಿನಂತೆಯೇ ಮತ್ತೆ 30 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ ಆಯೋಗವು ಕರಡು ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆ ಅವೈಜ್ಞಾನಿಕವಾಗಿದ್ದು ಜನಸಂಖ್ಯೆ ಮತ್ತು ವಿಸ್ತಾರವಾದ ಕ್ಷೇತ್ರ, ಮತದಾರರ ಸಂಖ್ಯೆಯನ್ನು ಆಧರಿಸಿ ಸದಸ್ಯ ಸ್ಥಾನಗಳನ್ನು 35 ಕ್ಕೆ ಹೆಚ್ಚಿಸಬೇಕು ಎಂದು ಆಕ್ಷೇಪಣಿ ಪತ್ರದಲ್ಲಿ ಬಸವರಾಜ ಮುಳ್ಳಾಳ ವಿನಂತಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-23-983413462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.