ಗದಗ: ‘ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ 500ರಿಂದ 600 ವರ್ಷಗಳಷ್ಟು ಹಳೆಯದು’ ಎಂದು ನಿಧಿ ಮೌಲ್ಯಮಾಪನಾ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ಕೃಷ್ಣಮೂರ್ತಿ ಮಂಗಳವಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಧಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಲಕ್ಕುಂಡಿಯಲ್ಲಿ ಸಿಕ್ಕಿದ್ದ 466 ಗ್ರಾಂ ಚಿನ್ನದ ಆಭರಣ ಆಕಾರ, ವಿನ್ಯಾಸ ಪರಿಶೀಲಿಸಿದಾಗ ವಿಜಯನಗರ ಸಾಮ್ರಾಜ್ಯದ ಅವಧಿಯ ಆಭರಣ ಇರಬಹುದು ಎಂದು ಅಂದಾಜಿಸಲಾಗಿದೆ. ಸಿಂಹ ಅಥವಾ ಕೀರ್ತಿ ಮುಖ ಇರುವ ಆಭರಣಗಳನ್ನು ಸಾಮಾನ್ಯ ಜನರು ಬಳಸುತ್ತಿರಲಿಲ್ಲ. ಇವು ಹೆಣ್ಣು ದೇವರಿಗೆ ಅರ್ಪಿಸಲು ತಯಾರಿಸಿದ ಆಭರಣದಂತೆ ಕಾಣುತ್ತವೆ’ ಎಂದು ತಿಳಿಸಿದರು.

‘ಚಿನ್ನದ ಆಭರಣಗಳಲ್ಲಿ ನೀಲಮಣಿ, ಪಚ್ಚೆ, ಹವಳದಂತಹ ಹರಳುಗಳಿವೆ. 466 ಗ್ರಾಂ ಚಿನ್ನದ ಇಂದಿನ ಬೆಲೆ ಅಂದಾಜು ₹80 ಲಕ್ಷ. ಆದರೆ, ಪುರಾತನ ಆಭರಣಗಳ ಮೌಲ್ಯ 10ಪಟ್ಟು ಹೆಚ್ಚಿಗೆ ಇರುತ್ತದೆ’ ಎಂದು ತಿಳಿಸಿದರು.

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ಕಾಲ ಪತ್ತೆ, ಮೌಲ್ಯಮಾಪನಕ್ಕೆ ಸರ್ಕಾರ ಡಾ.ಎಂ.ಎಸ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಐದು ಮಂದಿ ಸದಸ್ಯರ ತಂಡ ರಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.