ಲಕ್ಕುಂಡಿ: ವೀರಭದ್ರ ದೇವರ ಚರಿತ್ರೆ, ವಿವಿಧ ಅವತಾರಗಳ ಕುರಿತು ವೀರಾವೇಷದಿಂದ ಹೇಳುವ ಒಡುಪುಗಳು, 108 ಗಂಟು ಹಾಕಿದ 50 ಮೀಟರ್ ಉದ್ದದ ದಾರವನ್ನು ಶಸ್ತ್ರದ ಮೂಲಕ ಗಲ್ಲದಲ್ಲಿ ಹಾಕಿಕೊಂಡ ಭಕ್ತರು, ಮಕ್ಕಳಿಂದ ವೃದ್ಧರವರೆಗೆ ಅಗ್ನಿ ಕುಂಡದಲ್ಲಿ ಹಾಯ್ದ ಭಕ್ತ ಸಮೂಹ, ಸಮ್ಮಾಳ ಮೇಳದ ತಾಳಕ್ಕೆ ತಕ್ಕಂತೆ ಕುಣಿದ ಯುವಕರು, ಹಲವು ಪವಾಡಗಳನ್ನು ಮಾಡಿದ ಪುರವಂತರು... ಇಂತಹ ಹತ್ತಾರು ರೋಚಕ ದೃಶ್ಯಗಳು ಕಂಡು ಬಂದಿದ್ದು ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ನಡೆದ ಗುಗ್ಗಳೋತ್ಸವದಲ್ಲಿ.

ಕೋಟೆ ವೀರಭದ್ರೇಶ್ವರ ಮತ್ತು ಸಿದ್ದರಭಾವಿಯ ಮಧ್ಯೆ ಭೂಮಿಯಲ್ಲಿ ಅಡಗಿದ ಪ್ರಾಚ್ಯಾವಶೇಷಗಳನ್ನು ಪತ್ತೆ ಹಚ್ಚಲು 47 ದಿನ ನಡೆದ ಉತ್ಖನನದಿಂದ ದೇಶದ ಗಮನ ಸೆಳೆದ ಗ್ರಾಮ ಲಕ್ಕುಂಡಿ. ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದ 48ನೇ ವರ್ಷದ ಜಾತ್ರಾ ಮಹೋತ್ಸವ, ಗುಗ್ಗಳೋತ್ಸವವು ಮಂಗಳವಾರ ಬೆಳಿಗ್ಗೆ 8ಕ್ಕೆ ಪ್ಯಾಟಿ ಹನುಮಂತ ದೇವರ ದೇವಸ್ಥಾನದಿಂದ ಆರಂಭವಾಯಿತು.

ಗ್ರಾಮ ಹಾಗೂ ನಾಡಿನ ವಿವಿಧ ಕಡೆಯಿಂದ ಬಂದಿದ್ದ ಪುರವಂತರು, ವೀರಭದ್ರ ದೇವರ ವಿವಿಧ ಅವತಾರಗಳ ವೇಷ ಭೂಷಣಗಳನ್ನು ಧರಿಸಿದ್ದರು. ವೀರಾವೇಷದ ವೀರಭದ್ರೇಶ್ವರ, ದಕ್ಷ ಬ್ರಹ್ಮನ ಚರಿತ್ರೆಯ ಕುರಿತಾದ ಒಡುಪುಗಳು ಆಕರ್ಷಿಸಿದವು. ಇದರೊಂದಿಗೆ ಸಮ್ಮಾಳ ಮೇಳದ ತಾಳಕ್ಕೆ ಕುಣಿದ ಪುರವಂತರ ಹೆಜ್ಜೆಯ ಸೊಗಸು ಮನರಂಜಿಸಿತು. ಗುಗ್ಗಳೋತ್ಸವದ ಮೆರವಣಿಗೆಯುದ್ದಕ್ಕೂ ‘ಈರಣ್ಣ ದೊರೆಯೇ ನಿನಗಾರು ಸರಿಯೇ, ಸರಿ ಎಂದವರ ಹಲ್ಲು ಮುರಿಯೇ ಭೋ ಪರಾಕ’ ಎಂಬ ಘೋಷಣಿಗಳು ಮೊಳಗಿದವು.

ಮಹಿಳೆಯರು, ಮಕ್ಕಳು ಪುರವಂತರಿಂದ ತಮ್ಮ ಗಲ್ಲ ಮತ್ತು ಕೈಗಳಿಗೆ ಶಸ್ತ್ರ ಹಾಕಿಸಿಕೊಂಡು ಜನರು ಭಕ್ತಿ ಸಮರ್ಪಿಸಿದರು. ಯುವ ಭಕ್ತ ಸಮೂಹವು 108 ಗಂಟಿನ 50 ಮೀಟರ್ಗೂ ಹೆಚ್ಚು ಇರುವ ದಾರವನ್ನು 50ಕ್ಕೂ ಹೆಚ್ಚು ಯುವಕರು ತಮ್ಮ ಗಲ್ಲದಲ್ಲಿ ಸೇರಿಸಿಕೊಳ್ಳುತ್ತಿರುವ ದೃಶ್ಯ ಸೇರಿದ ಭಕ್ತರನ್ನು ರೋಮಾಂಚನಗೊಳಿಸಿತು.

ಉತ್ಖನನ ನಡೆದ ಸ್ಥಳದ ಪಕ್ಕದಲ್ಲಿ ರಚನೆ ಮಾಡಿದ್ದ 20X10 ಅಡಿ ಅಳತೆಯ ಅಗ್ನಿ ಕುಂಡದಲ್ಲಿ ನೂರಾರು ಭಕ್ತರು ಹಾಯ್ದು ವೀರಭದ್ರ ದೇವರ ದರ್ಶನ ಪಡೆದರು. ಮಕ್ಕಳು, ಯುವಕರು, ವೃದ್ಧರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರವಾದ ಫಲ್ಲಕ್ಕಿ ಮತ್ತು ಸಮ್ಮಾಳ ಮೇಳದ ವಾದ್ಯಗಳನ್ನು ಹೊತ್ತುಕೊಂಡು ಅಗ್ನಿಕುಂಡದಲ್ಲಿ ಹಾಯ್ದು ದೃಶ್ಯ ಭಕ್ತಿಯನ್ನು ಇಮ್ಮಡಿಗೊಳಿಸಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-23-1144853558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.