ಗದಗ: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಟ್ಟಿಹಳ್ಳದಲ್ಲಿ ಸೋಮವಾರ ಚಾಲುಕ್ಯರ ರಾಜ ಎರಡನೇ ಜಗದೇಕಮಲ್ಲನ ಆಳ್ವಿಕೆ ಅವಧಿಯ 13 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ.

ಪ್ರಾಚ್ಯ ಅವಶೇಷಗಳ ಅನ್ವೇಷಣೆ ವೇಳೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಬಟ್ಟೂರು ಮತ್ತು ಕವಲೂರ ಅವರಿಗೆ ಸೇರಿದ ಜಮೀನಿನ ಹತ್ತಿರದ ಕಟ್ಟಿಹಳ್ಳದ ಪಕ್ಕದಲ್ಲಿ ಈ ಶಾಸನ ಪತ್ತೆಯಾಗಿದೆ.

‘ಶಾಸನದ ಆರಂಭದಲ್ಲಿ ಶಿವಸ್ತುತಿ ಇದೆ. ಇದು ಶಿವಾಲಯಕ್ಕೆ ಭೂದಾನ ಕೊಟ್ಟ ಶಾಸನವಾಗಿರಬಹುದು. ಶಾಸನದ ಸ್ಪಷ್ಟವಾದ ಕಾಲ ಲಭ್ಯವಿಲ್ಲ. ಜಗದೇಕಮಲ್ಲನ ಆಳ್ವಿಕೆಯ ಕಾಲ ಕ್ರಿಶ 1139-1149. ಜಗದೇಕ ಮಲ್ಲನ 10 ವರ್ಷದ ಆಡಳಿತದ ಅವಧಿಯಲ್ಲಿ ಈ ಶಾಸನ ರಚನೆ ಆಗಿರಬಹುದು. ಲಿಪಿದೃಷ್ಟಿಯಿಂದ ಶಾಸನದ ಕಾಲವನ್ನು 12ನೇ ಶತಮಾನದ ರಚನೆ ಎಂದೂ ಹೇಳಬಹುದು’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-51-1996039146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.