ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸಂತ ದೂದಪೀರಾಂ ಮಹಾತ್ಮರ 137ನೇ ಉರುಸ್ ಮಾರ್ಚ್ 31ರಿಂದ ಏ.5ರವರೆಗೆ ಜರುಗಲಿದೆ ಎಂದು ದರ್ಗಾ ಸಮಿತಿ ಕಾರ್ಯದರ್ಶಿ ಸಾಯಿಬ್ಜಾನ್ ಹವಾಲ್ದಾರ ತಿಳಿಸಿದರು.

ದರ್ಗಾ ಆಡಳಿತ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿವರ್ಷದಂತೆ ಈ ವರ್ಷ ದೂದಪೀರಾಂ ಮಹಾತ್ಮರ ಉರುಸ್ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ 31ರಂದು ಸಂದಲ್ ಗಂಧ ನಡೆಯಲಿದ್ದು ಅಂದು ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿನ ಖಾದರ್ಬಾಷಾ ದರ್ಗಾದಿಂದ ಮೆರವಣಿಗೆ ಮೂಲಕ ಗಂಧ ತರಲಾಗುವುದು’ ಎಂದರು.

‘ಏ.1ರಂದು ಗಲೀಫ ಅಂಗವಾಗಿ ತಾಜ್ಮಹಲ್ ಮೆರವಣಿಗೆ ನಡೆಯಲಿದು. ಅಂದು ಸವಣೂರಿನ ರಬ್ಬಾನಿ ಮತ್ತು ಬೆಳಗಾವಿ ಬ್ಯಾಂಡ್ ಕಂಪನಿ ವತಿಯಿಂದ ಮನರಂಜನಾ ಕಾರ್ಯಕ್ರಮ ನಡೆಯುವುದು. ಏ.4ರಂದು ವಾಜ ಬಯಾನ್ ಜರುಗಲಿದ್ದು ರಾತ್ರಿ 9ಕ್ಕೆ ಹಾಶೀಮಿಯ್ಯಾ ಆಶ್ರಫಿ ಮತ್ತು ಮುಯೀಜ್ ಆಶ್ರಫ್ ಆಶ್ರಫಿ ಅವರಿಂದ ಧಾರ್ಮಿಕ ಕಾರ್ಯಕ್ರಮ ನೆರವೇರುವುದು’ ಎಂದು ತಿಳಿಸಿದರು.

‘ಏ.5ರಂದು ನಡೆಯುವ ಖವ್ವಾಲಿ ಕಾರ್ಯಕ್ರಮವನ್ನು ಮುಂಬಯಿನ ಇಪ್ತೆಕಾರಿ ಬ್ರದರ್ಸ್ ಮತ್ತು ಸೂಫಿ ಮುಜ್ತಭಾ ಅಜೀಜ್ ನಾಜಾ ಅವರು ನಡೆಸಿಕೊಡಲಿದ್ದಾರೆ. ಈ ವರ್ಷ ಶಾಲೆಗಳಿಗೆ ರಜೆ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಸಚಿವ ಎಚ್.ಕೆ. ಪಾಟೀಲ, ಜಮೀರ್ ಅಹಮ್ಮದ್, ಶ್ರೀನಿವಾಸ ಮಾನೆ, ಜಿ.ಎಸ್.ಪಾಟೀಲ ಸೇರಿದಂತೆ ಮಾಜಿ ಶಾಸಕರು ಪಾಲ್ಗೊಳ್ಳುವರು’ ಎಂದರು.

‘ಹೆಚ್ಚಿನ ಜನ ಆಗಮಿಸುವ ಹಿನ್ನೆಲೆಯಲ್ಲಿ ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು, ಅನ್ನದಾಸೋಹ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

ದರ್ಗಾ ಸಮಿತಿ ಸದಸ್ಯ ದಾದಾಪೀರ್ ಮುಚ್ಛಾಲೆ ಮಾತನಾಡಿ ‘ಈ ವರ್ಷ ಹೆಚ್ಚು ಬಿಸಿಲು ಇರುವ ಕಾರಣ ಪೆಂಡಾಲ್ ಹಾಗೂ ವಾಹನದಟ್ಟಣೆ ಆಗದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ್ಸಾಬ್ ಕಣಕೆ, ಉಪಾಧ್ಯಕ್ಷ ಇರ್ಪಾನ್ಬೇಗ್ ಮಿರ್ಜಾ, ದಾದಾಪೀರ್ ಕಾರಡಗಿ, ನೂರ್ಅಹಮ್ಮದ್ ಸಿದ್ದಿ, ಕಲಂದರ್ ಸೂರಣಗಿ, ಪಹಿಮುಲ್ಲಾ ಎಂ.ಪಲ್ಲಿ, ಮಹಮ್ಮದ್ಸಾದಿಕ್, ಮಹಮ್ಮದ್ರಫೀಕ್ ಸಿದ್ದಾಪುರ, ಅಕ್ಬರ್ಸಾಬ್ ಸೂರಣಗಿ, ಮಾಬುಸಾಬ್ ಮುಳಗುಂದ ಇದ್ದರು.

ಇದೇ ಸಂದರ್ಭದಲ್ಲಿ ಉರುಸ್ ಕಾರ್ಯಕ್ರಮದ ಪ್ರಚಾರ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-23-683021520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.