ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಈ ವರ್ಷ ಯೂರಿಯಾ ರಸಗೊಬ್ಬರದ ಬಳಕೆ ಮಿತಿಮೀರಿದ್ದು, ಈಗಾಗಲೇ ಕೃಷಿ ಇಲಾಖೆಯ ಗುರಿ ಮೀರಿ ಗೊಬ್ಬರ ಮಾರಾಟ ಆಗಿದೆ. ಸದ್ಯ ಲಕ್ಷ್ಮೇಶ್ವರ ತಾಲ್ಲೂಕಿನ ರೈತರಿಗೇ ಗೊಬ್ಬರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆನಾಶಕ ಔಷಧದ ಜತೆಗೆ ಯೂರಿಯಾ ಗೊಬ್ಬರ ಸೇರಿಸಿ ಹಾಕಿದರೆ ಯಾವುದೇ ಕಳೆ ಇದ್ದರೂ ನಾಶವಾಗುತ್ತದೆ ಎಂಬ ಸುದ್ದಿ ಹಬ್ಬಿದ್ದರಿಂದ ರೈತರು ಈ ವರ್ಷ ಕಳೆನಾಶಕ್ಕಾಗಿ ಯೂರಿಯಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ.

ಅಲ್ಲದೆ ಕೊಲ್ಲಿ ಯುದ್ಧದ ಪರಿಣಾಮ ಗೊಬ್ಬರ ಉತ್ಪಾದನೆಯಲ್ಲಿ ಕಡಿತ ಆಗುವ ಸೂಚನೆಗಳ ಹಿನ್ನೆಲೆಯಲ್ಲಿ ರೈತರು ಸಾಕಾಗುಷ್ಟು ಪ್ರಮಾಣದಲ್ಲಿ ಗೊಬ್ಬರ ಖರೀದಿಸಿದ್ದಾರೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಮತ್ತು ಹಾವೇರಿ ಜಿಲ್ಲೆ ಸವಣೂರು ಮತ್ತು ಹಾವೇರಿ ತಾಲ್ಲೂಕುಗಳ ಹತ್ತಾರು ಗ್ರಾಮಗಳ ನೂರಾರು ರೈತರು ಈಗಾಗಲೇ ಯೂರಿಯಾ ಖರೀದಿಸಿದ್ದಾರೆ. ಈ ಕಾರಣಕ್ಕಾಗಿ ಈ ವರ್ಷ ತಾಲ್ಲೂಕಿನಲ್ಲಿ ಯೂರಿಯಾ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಿದೆ.

‘ಪ್ರತಿ ವರ್ಷ ಆ ಭಾಗದ ರೈತರು ಮಳೆ ಬೀಳುವ ಮುನ್ನವೇ ಸಾವಿರಾರು ಟನ್ ಗೊಬ್ಬರವನ್ನು ಲಕ್ಷ್ಮೇಶ್ವರ ತಾಲ್ಲೂಕಿನ ಗೊಬ್ಬರದ ಅಂಗಡಿಗಳಲ್ಲಿ ಖರೀದಿ ಮಾಡುತ್ತಾರೆ. ಆದರೆ ಮಳೆ ಸುರಿದ ನಂತರ ತಾಲ್ಲೂಕಿನ ರೈತರು ಗೊಬ್ಬರ ಖರೀದಿಗೆ ಬರುತ್ತಾರೆ. ಹೀಗಾಗಿ ನಮ್ಮ ರೈತರಿಗೆ ಸಕಾಲಕ್ಕೆ ಗೊಬ್ಬರ ಸಿಗದ ಪರಿಸ್ಥಿತಿ ಉಂಟಾಗುತ್ತದೆ. ಒಂದು ಮಳೆ ಆದರೂ ರೈತರು ಗೊಬ್ಬರಕ್ಕಾಗಿ ಅಂಗಡಿಗಳಿಗೆ ಮುಗಿ ಬೀಳುತ್ತಾರೆ’ ಎಂದು ಗೊಬ್ಬರ ಅಂಗಡಿ ಮಾಲೀಕರೊಬ್ಬರು ಹೇಳಿದರು.

ಫೆಬ್ರುವರಿ, ಮಾರ್ಚ್, ಏಪ್ರಿಲ್ವರೆಗೆ ಎಫ್ಐಡಿ ಇಲ್ಲದೆ ರೈತರು ಯೂರಿಯಾ ಖರೀದಿಸಲು ಕೃಷಿ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಮೇ ತಿಂಗಳಲ್ಲಿ ಮಾತ್ರ ಎಫ್ಐಡಿ ಮೂಲಕ ಗೊಬ್ಬರ ಮಾರಾಟ ಮಾಡುವಂತೆ ವ್ಯಾಪಾರಸ್ಥರಿಗೆಸೂಚಿಸಿದೆ. ಎಫ್ಐಡಿ ಮೂಲಕ ಗೊಬ್ಬರ ಖರೀದಿ ಸರಳ ಇಲ್ಲ. ಇದರಿಂದಾಗಿ ರೈತರಿಗೆ ತೊಂದರೆ ಆಗುತ್ತದೆ.

ಅತಿಯಾದ ರಸಗೊಬ್ಬರ ಬಳಕೆ ಬೇಡ ಎಂದು ಕೃಷಿ ಇಲಾಖೆ ಈಗಾಗಲೇ ತಾಲ್ಲೂಕಿನ ಹತ್ತಾರು ಊರುಗಳಲ್ಲಿ ‘ಧರ್ತಿ ಮಾತಾ ಬಚಾವೋ ಅಭಿಯಾನ’ ನಡೆಸುತ್ತಿದೆ. ಯಾವ ಪ್ರಮಾಣದಲ್ಲಿ ಗೊಬ್ಬರ ಬಳಕೆ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಆದರೂ ಗೊಬ್ಬರ ಖರೀದಿ ಮಾತ್ರ ನಿಂತಿಲ್ಲ. ಅಧಿಕಾರಿಗಳು ರೈತರಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಆದರೂ ರೈತರ ಚಿತ್ತ ಗೊಬ್ಬರ ಖರೀದಿಯಿಂದಾಚೆ ಬರುತ್ತಿಲ್ಲ.

‘ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ನೂರಾರು ರೈತರು ಲಕ್ಷ್ಮೇಶ್ವರದಲ್ಲಿ ಗೊಬ್ಬರ ಖರೀದಿ ಮಾಡುತ್ತಾರೆ. ಕಾರಣ ಸರ್ಕಾರ ಹೆಚ್ಚು ಗೊಬ್ಬರನ್ನು ಲಕ್ಷ್ಮೇಶ್ವರ ತಾಲ್ಲೂಕಿಗೆ ಕೊಡಬೇಕು’ ಎಂದು ತಾಲ್ಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.