ಲಕ್ಷ್ಮೇಶ್ವರ: ಹೆಸರು ಬೆಳೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷ್ಮೇಶ್ವರ ತಾಲ್ಲೂಕು ಘಟಕ ಮತ್ತು ಲಕ್ಷ್ಮೇಶ್ವರ ನಗರ ಘಟಕದ ಕಾರ್ಯಕರ್ತರು ತಹಶೀಲ್ದಾರರ ಕಚೇರಿ ಎದುರು ನಡೆಸಿ ಮನವಿ ಸಲ್ಲಿಸಿದರು.
ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಮಾತನಾಡಿ, ‘ತಾಲ್ಲೂಕಿನ ರೈತರು ಸಾಲ ಮಾಡಿ ಹೆಸರು ಬೆಳೆದಿದ್ದಾರೆ. ಆದರೆ ಬೆಂಬಲ ಬೆಲೆ ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಕೈಗೆ ಬಂದ ದರಕ್ಕೆ ಹೆಸರು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ನಷ್ಟು ಉಂಟಾಗುತ್ತಿದೆ. ಕಾರಣ ಆದಷ್ಟು ಬೇಗನೇ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ ಸುತಾರ, ರೈತ ಘಟಕದ ಅಧ್ಯಕ್ಷ ಸಿ.ಎಫ್. ಗಡ್ಡದೇವರಮಠ, ಶಂಕರಗೌಡ ಪಾಟೀಲ, ಪ್ರವೀಣ ಗೌರಿ, ಪ್ರಕಾಶ ಕೊಂಚಿಗೇರಿಮಠ, ಕುಮಾರ ನರೇಗಲ್ಲ, ಪ್ರವೀಣ ಗುಡಗೇರಿ, ರಮೇಶ ಪೂಜಾರ, ಆದೇಶ ಸವಣೂರ, ಚಂದ್ರು ನೀರಲಗಿ ಮತ್ತಿತರರು ಇದ್ದರು.