ಲಕ್ಷ್ಮೇಶ್ವರ: ಪಟ್ಟಣದ ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಯನ್ನು ರಾಜ್ಯ ವಲಯ ವಿಶೇಷ ಅಭಿವೃದ್ದಿ ಯೋಜನೆ ಕಾರ್ಯಕ್ರಮದಡಿಯಲ್ಲಿ ₹11.88 ಲಕ್ಷದ ಕಾಮಗಾರಿಗೆ ಶಾಸಕ ಡಾ.ಚಂದ್ರು ಲಮಾಣಿ ಚಾಲನೆ ನೀಡಿದರು.

‘ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತರುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಅದರಂತೆ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಆದ್ಯತೆ ಅನುಸಾರ ಅನುದಾನವನ್ನು ಮಂಜೂರು ಮಾಡಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದ್ದು, ಈ ಶಾಲೆಯ ಆವರಣಗೋಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ಈ ವೇಳೆ ರಾಜ್ಯ ಪ್ರಶಸ್ತಿಗೆ ಭಾಜನರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕೀ ನಾಯಕ್ ಅವರನ್ನು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಕೆ.ಹವಾಲ್ದಾರ, ಮುಖ್ಯೋಪಾಧ್ಯಾಯ ಬಿ.ಸಿ.ಪಟ್ಟೇದ, ಎ.ಎನ್.ಮುಳಗುಂದ, ಎಚ್.ಎಂ.ಗುತ್ತಲ್, ಎಸ್.ಡಿ.ಲಮಾಣಿ, ಎಂ.ಆರ್.ಹಿರೇಮಠ, ಎಸ್.ಜಿ.ಅಂಗಡಿ, ಎನ್.ಎನ್.ಸ್ಮಣಗಾರ, ಎಸ್.ಎಸ್.ರಾಥೋಡ, ಎ.ಎಂ.ಅಕ್ಕಿ, ಪಿ.ಎಸ್.ಪುರಾಣಿಕಮಠ, ಯು.ಎಸ್.ನೇಕಾರ, ಎಸ್.ಬಿ.ಪೂಜಾರ, ಮುಖಂಡರಾದ ವಿಜಯಕುಮಾರ ಹತ್ತಿಕಾಳ, ಬಿಜೆಪಿ ನಗರ ಘಟಕದ ನೂತನ ಅಧ್ಯಕ್ಷ ವಿಜಯ ಕುಂಬಾರ, ನೂತನ ಪ್ರಧಾನ ಕಾರ್ಯದರ್ಶಿ ಪ್ರವೀಣ ಬೋಮಲೆ, ಗಂಗಾಧರ ಮೆಣಸಿನಕಾಯಿ, ಸೋಮೇಶ ಉಪನಾಳ, ಗಿರೀಶ ಚೌರಡ್ಡಿ, ಬಸವರಾಜ ಚಕ್ರಸಾಲಿ, ಈರಪ್ಪ ಹಾದಿಮನಿ, ಆರ್.ಐ. ಹಬಸಿ, ಆರ್.ಆರ್.ನಾಯ್ಕರ, ಎ.ಎಂ.ಕುಂಬಾರ, ಚಂದ್ರು ಮಾಗಡಿ, ಎನ್.ಬಿ.ರಡ್ಡೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-23-1860966646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.