ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ದ ಲಕ್ಷ್ಮೇಶ್ವರ ಆರಾಧ್ಯದೈವ ಪುಲಿಗೆರೆ ಸೋಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕಳಶದ ಪೂಜೆಯೊಂದಿಗೆ ಕಳಸಾರೋಹಣ ನೆರವೇರಿಸಲಾಯಿತು.

ಈ ವೇಳೆ ಶ್ರೀ ಸೋಮೇಶ್ವರ ಭಕ್ತ ಸೇವೆ ಕಮಿಟಿಯ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಮತ್ತು ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ ಮಾತನಾಡಿ, ‘ಪುಲಿಗೆರೆ ಸೋಮೇಶ್ವರನಿಗೆ ಕನ್ನಡ ನಾಡಿನಲ್ಲಿ ಹಿರಿದಾದ ಸ್ಥಾನಮಾನವಿದೆ. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೊಳಪಟ್ಟ ಈ ಐತಿಹಾಸಿಕ ದೇವಸ್ಥಾನದ ಅಭಿವೃದ್ದಿ ಕಾರ್ಯಗಳು ಹಂತಹಂತವಾಗಿ ನಡೆಯುತ್ತಿವೆ. ಇದೀಗ ಪ್ರವಾಸೋದ್ಯಮ ಸಚಿವರ ಇಚ್ಛಾಸಕ್ತಿಯಿಂದ ಉತ್ತರ ದ್ವಾರದ ಅಭಿವೃದ್ದಿ ಕಾರ್ಯ ನಡೆಯುತ್ತಿದೆ’ ಎಂದರು.

‘ನಾಡಿನುದ್ದಕ್ಕೂ ಅಪಾರ ಭಕ್ತರನ್ನು ಹೊಂದಿರುವ ಸೋಮೇಶ್ವರನ ಜಾತ್ರಾ ಮಹೋತ್ಸವ ಏ.25ರಿಂದ ಪ್ರಾರಂಭಗೊಳ್ಳಲಿದೆ. ಏ.25 ರಂದು ಸಂಜೆ 6.30ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ರಥಪೂಜೆ ನೆರವೇರಲಿದೆ. ಏ.26 ರಂದು ಸಂಜೆ 6ಕ್ಕೆ ಸೋಮೇಶ್ವರ ಮಹಾರಥೋತ್ಸವ, ಏ.27 ರಂದು ಸಂಜೆ ಕಡುಬಿನ ಕಾಳಗ, ಏ.28ರಂದು ರಾತ್ರಿ 8ಕ್ಕೆ ಓಕುಳಿ ಕಾರ್ಯಕ್ರಮ ನೆರವೇರಲಿದೆ’ ಎಂದು ಹೇಳಿದರು.

ಬಸವೇಶ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಜಾವೂರ, ಸಿದ್ದನಗೌಡ ಬಳ್ಳೊಳ್ಳಿ, ಸೋಮಣ್ಣ ಮುಳಗುಂದ, ಶಿವಯೋಗಿ ಅಂಕಲಕೋಟಿ, ನೀಲಪ್ಪ ಶರಸೂರಿ, ಸೋಮಣ್ಣ ತಂಡಿಗೇರ, ರಾಮಣ್ಣ ಗೌರಿ, ಪ್ರಕಾಶ ಮುಳಗುಂದ, ಸೊಮಣ್ಣ ಅಣ್ಣಿಗೇರಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್, ಸೋಮೇಶ್ವರ ಅರ್ಚಕರ ಸೇವಾ ಸಮಿತಿ, ಪುರಾಣ ಸೇವಾ ಸಮಿತಿ, ಅರ್ಚಕ ಸಮಿರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-1470827019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.