ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಅವರು ಸೋಮವಾರ ಪರ್ಸಿ ಪೈಕಿ ಕಡೇ ಕುಸ್ತಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕುಸ್ತಿ ಭಾರತದ ದೇಸಿ ಕ್ರೀಡೆ. ಕ್ರೀಡಾರಂಗದಲ್ಲಿ ಅದಕ್ಕೆ ವಿಶೇಷ ಸ್ಥಾನ ಉಂಟು. ಕುಸ್ತಿ ಆಡುವುದರಿಂದ ಕ್ರೀಡಾಪಟುಗಳಲ್ಲಿ ಧೈರ್ಯ, ಸಾಹಸ ಬೆಳೆಯುತ್ತದೆ. ಮೈಸೂರು ಮಹಾರಾಜರು ಕುಸ್ತಿಗೆ ಹೆಚ್ಚು ಮಹತ್ವ ನೀಡಿದ್ದರು. ಪ್ರತಿವರ್ಷ ನಡೆಯುವ ದಸರಾ ಮಹೋತ್ಸವದಲ್ಲಿ ಇಂದಿಗೂ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿರುವುದಕ್ಕೆ ಅವರ ಪ್ರೋತ್ಸಾಹವೇ ಕಾರಣ. ಕುಸ್ತಿ ಅಪ್ಪಟ ಗ್ರಾಮೀಣ ಕ್ರೀಡೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.

ಮಾಜಿ ಪೈಲ್ವಾನರಾದ ಅಮರಪ್ಪ ಗುಡಗುಂಟಿ, ನೀಲಪ್ಪ ಗಡಾದ, ಹಾಲಪ್ಪ ಅಡರಕಟ್ಟಿ, ಹನಮಂತಪ್ಪ ತಂಬ್ರಳ್ಳಿ, ನಿರ್ಣಾಯಕರಾಗಿ ಆಗಮಿಸಿದ್ದರು. ಯಲ್ಲಪ್ಪ ತಳವಾರ, ಸಂಜೀವ ದೇಸಾಯಿ, ಹನಮಂತಪ್ಪ ತಳವಾರ, ಹುಸೇನ್ಸಾಬ್ ತಹಶೀಲ್ದಾರ, ಹುಸೇನ್ಸಾಬ್ ಬಡ್ನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-23-1595568347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.