ಲಕ್ಷ್ಮೇಶ್ವರ: ‘ಜನಗಣತಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಪ್ರಮುಖ ದಾಖಲೆ ಆಗಿದ್ದು, ಗಣತಿದಾರರು ಯಾವುದೇ ಲೋಪದೋಷ ಇಲ್ಲದಂತೆ ನಿಖರವಾದ ಮಾಹಿತಿ ದಾಖಲಿಸಬೇಕು’ ಎಂದು ತಾಲ್ಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣತಿ ಮೇಲ್ವಿಚಾರಕ ಜಿ.ಎಸ್. ಜಗಲಿ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ನಡೆದ ಗಣತಿ ಕಾರ್ಯದ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದರು.

‘ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಕಟ್ಟಡ ಹಾಗೂ ನಿವಾಸದ ವಿವರ, ಸಾಲಿನ ಸಂಖ್ಯೆ, ಕಟ್ಟಡದ ಸಂಖ್ಯೆ ಮತ್ತು ಜನಗಣತಿ ಮನೆ ಸಂಖ್ಯೆಯನ್ನು ನಿಖರವಾಗಿ ಗುರುತಿಸುವುದು. ಮನೆಯ ನೆಲ, ಗೋಡೆ ಮತ್ತು ಚಾವಣಿಗೆ ಬಳಸಲಾಗಿರುವ ಪ್ರಧಾನ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆಯುವುದು, ಜನಗಣತಿ ಮನೆಯನ್ನು ವಾಸಕ್ಕೆ ಅಥವಾ ಇತರೆ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಹಾಗೂ ಮನೆಯ ಈಗಿನ ಸ್ಥಿತಿಗತಿ ಸೇರಿದಂತೆ ಅಗತ್ಯ ಮಾಹಿತಿ ಪಡೆಯಬೇಕು’ ಎಂದರು.

‘ಪ್ರತಿ ಗಣತಿದಾರರು ಇಲಾಖೆ ನೀಡಿರುವ ಕೈಪಿಡಿಯನ್ನು ಸರಿಯಾಗಿ ಅಭ್ಯಸಿಸಬೇಕು, ಯಾವುದೇ ಮಾಹಿತಿ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸುವುದು ಗಣತಿದಾರರ ಜವಾಬ್ದಾರಿ’ ಎಂದು ಹೇಳಿದರು.

ಎಂ.ಎಸ್. ಹಿರೇಮಠ, ಪರಮೇಶ ಕಾಳಶೆಟ್ಟಿ, ಸುನಂದಾ ಹಿರೇಮಠ, ಲತಾ ಹಿರೇಮಠ, ಡಿ.ಡಿ. ಲಮಾಣಿ, ಎನ್.ಎನ್. ಶಿಗ್ಲಿ, ಎಸ್.ಎಂ.ಕೌಜಗೇರಿ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-23-1212093559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.