ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯದ ಬಯಲು ಪ್ರದೇಶದಲ್ಲಿ ಮೇಲ್ಮಟ್ಟದ ಜಲಾಗಾರ ನಿರ್ಮಿಸುತ್ತಿದ್ದು, ತಕ್ಷಣ ಅದನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ವಕೀಲ ಬಿ.ಎಸ್.ಬಾಳೇಶ್ವರಮಠ ಆಗ್ರಹಿಸಿದರು.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದರು.

‘ಜಲಾಗಾರ ನಿರ್ಮಿಸಲು ಸಾಕಷ್ಟು ಜಾಗೆಗಳು ಇವೆ. ಆದರೆ ಅದನ್ನು ಮಹಾವಿದ್ಯಾಲಯದ ಬಯಲಿನಲ್ಲೇ ನಿರ್ಮಿಸುವ ಜರೂರತ್ತಾದರೂ ಏನು ಎಂದು ಪ್ರಶ್ನಿಸಿದ ಅವರು ಸದ್ಯ ನಿರ್ಮಾಣ ಆಗುತ್ತಿರುವ ಜಲಾಗಾರ ಪಕ್ಕದಲ್ಲಿಯೇ ಹತ್ತಾರು ವರ್ಷಗಳ ಹಿಂದೆ ನಿರ್ಮಿಸಿದ ಗ್ರಂಥಾಲಯ ಇದೆ. ಇನ್ನು ಕೆಲ ದಿನಗಳಲ್ಲೇ ಪುರಸಭೆ ಕಲಾ ಮಹಾವಿದ್ಯಾಲಯ ಸರ್ಕಾರಿ ಮಹಾವಿದ್ಯಾಲಯ ಆಗಲಿದೆ. ಒಂದು ವೇಳೆ ಜಲಾಗಾರ ನಿರ್ಮಾಣವಾದರೆ ಸರ್ಕಾರ ಮಹಾವಿದ್ಯಾಲಯ ನಡೆಸಲು ಮುಂದೆ ಬಾರದೆ ಇರಬಹುದು. ಕಾರಣ ಅಲ್ಲಿಂದ ಜಲಾಗಾರವನ್ನು ಬೇರೆಡೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳಾದ ಸೋಮೇಶ ಉಪನಾಳ, ಮಹೇಶ ಹೊಗೆಸೊಪ್ಪಿನ, ಎಂ.ಆರ್. ಪಾಟೀಲ, ತಿಪ್ಪಣ್ಣ ಸಂಶಿ ಮಾತನಾಡಿ ‘ಕಾಲೇಜಿನ ಆವರಣದಲ್ಲಿ ಜಲಾಗಾರ ನಿರ್ಮಿಸುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಪಟ್ಟಣದಲ್ಲಿ ಹತ್ತಾರು ಕಡೆ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿದ ಜಾಗೆಗಳು ಇದ್ದು ಅಲ್ಲಿ ನಿರ್ಮಿಸಬೇಕು. ಇಲ್ಲದಿದ್ದರೆ ಯಾವುದೇ ಹೋರಾಟಕ್ಕಾದರೂ ಸಿದ್ಧ’ ಎಂದು ಎಚ್ಚರಿಸಿದರು.

ಫಕ್ಕೀರೇಶ ಭಜಕ್ಕನವರ, ಶರಣು ಗೋಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮುತ್ತಣ್ಣ ಗಡೆಪ್ಪನವರ, ರಾಮಣ್ಣ ಲಮಾಣಿ, ಪ್ರಕಾಶ ಕೊಂಚಿಗೇರಿಮಠ, ನೀಲಪ್ಪ ಪಡಿಗೇರಿ ಇದ್ದರು. ನಂತರ ಹೋರಾಟಗಾರರು ನಿರ್ಮಾಣವಾಗುತ್ತಿರುವ ಜಲಾಗಾರಕ್ಕೆ ಭೇಟಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-23-227850182

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.