ಲಕ್ಷ್ಮೇಶ್ವರ: ‘ಎಫ್ಐಡಿ ಯೋಜನೆಯಡಿ ಒಟಿಪಿ ಮೂಲಕ ರೈತರಿಗೆ ಬೀಜ, ಗೊಬ್ಬರ ವಿತರಿಸಬೇಕು. ರೈತರಿಂದ ಹೆಬ್ಬೆಟ್ಟು ಪಡೆದು ಬೀಜ, ಗೊಬ್ಬರ ಕೊಡುವುದನ್ನು ನಿಲ್ಲಿಸಬೇಕು’ ಎಂದು ಹೋರಾಟಗಾರ ರವಿಕಾಂತ ಅಂಗಡಿ ಹೇಳಿದರು.

ಪಟ್ಟಣದ ಮಂಜುನಾಥ ಮಾಗಡಿ ಅವರ ಮಿಲ್ ಆವರಣದಲ್ಲಿ ಶುಕ್ರವಾರ ಸಮಗ್ರ ರೈತಪರ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯೂರಿಯಾ ಪೂರೈಕೆ ಬಗ್ಗೆ ಸರ್ಕಾರ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಒಂದು ಎಕರೆಗೆ ಒಂದೇ ಚೀಲ ಎಂಬುದನ್ನು ಕೈಬಿಟ್ಟು ಹೆಚ್ಚಿನ ಗೊಬ್ಬರ ವಿತರಣೆ ಮಾಡಬೇಕು. ಅಧಿಕಾರಿಗಳು ಕೇವಲ ಕೆಲವು ಕಂಪನಿ ರಸಗೊಬ್ಬರಗಳ ಬಗ್ಗೆ ರೈತರಿಗೆ ಮಾಹಿತಿ ಕೊಡುತ್ತಾರೆ. ಇನ್ನೂ ಸಾಕಷ್ಟು ಕಂಪನಿಗಳು ಇದ್ದರೂ ಅವುಗಳ ಬಗ್ಗೆ ರೈತರಿಗೆ ಮಾಹಿತಿ ಕೊಡುತ್ತಿಲ್ಲ’ ಎಂದು ಆರೋಪಿಸಿದ ಅವರು ‘ರೈತರಿಗೆ ಸಿಗಬೇಕಾದ ಸೌಲಭ್ಯಗಳು ನೇರವಾಗಿ ಅವರಿಗೆ ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಶಿರಹಟ್ಟಿ ಮತಕ್ಷೇತ್ರದಲ್ಲಿ ಬೆಳೆದ ಬೆಳೆಗಳ ಕುರಿತು ಜಿಪಿಎಸ್ ಮಾಡಿದ್ದರೂ ಸಹ ಸಾವಿರಾರು ರೈತರಿಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲ. ಕಾರಣ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದರು.

ಸಮಗ್ರ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಮಾಗಡಿ, ಕೃಷಿಕ ಸಮಾಜ (ನವದೆಹಲಿ) ತಾಲ್ಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ ‘ಬೆಳೆ ವಿಮೆ ರೈತರಿಗೆ ಬಂದಿಲ್ಲ. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿರುವ ಎಲ್ಲ ಬೆಳೆಗಳಿಗೆ ಬೇಗನೆ ಹಣ ಸಂದಾಯ ಮಾಡಬೇಕು. ಮುಂಗಾರು ಬಿತ್ತನೆ ಸಂದರ್ಭದಲ್ಲಿ ರೈತರು ಕೇಳಿದಷ್ಟು ರಸಗೊಬ್ಬರ ಪೂರೈಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ‘ರೈತರ ಸಮಸ್ಯೆ ಬಂದಾಗ ಪಕ್ಷಾತೀತವಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಸದ್ಯ ರೈತರು ಎದುರಿಸುತ್ತಿರುವ ಸಮರ್ಪಕವಾಗಿ ಪೂರೈಕೆ ಆಗದ ಗೊಬ್ಬರ ಹಾಗೂ ಬಾರದ ಬೆಳೆ ವಿಮೆ ಪರಿಹಾರ ವಿರುದ್ಧ ಮತ್ತೆ ರೈತರೊಂದಿಗೆ ಹೋರಾಟ ಮಾಡಲಾಗುವುದು. ಕಾರಣ ಸಂಬಂಧಿಸಿದ ಅಧಿಕಾರಿಗಳು ಬೇಗನೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಬಸವರಾಜ ಹಿರೇಮನಿ, ನೀಲಪ್ಪ ಶರಸೂರಿ, ಹೊನ್ನಪ್ಪ ವಡ್ಡರ, ಟಾಕಪ್ಪ ಸಾತಪುತೆ ಮಾತನಾಡಿದರು. ನಾಮದೇವ ಮಾಂಡ್ರೆ, ಸಂಜೀವ ಹುಡೇದ, ಮಂಜುನಾಥ ಮುಳಗುಂದ, ಶಂಕರ ಬ್ಯಾಡಗಿ, ವೀರಣ್ಣ ಕಟಗಿ, ಪವನ ಬಂಕಾಪುರ, ಮುತ್ತಣ್ಣ ನೀರಲಗಿ, ಮಲ್ಲಿಕಾರ್ಜುನ ನೀರಾಲೋಟಿ, ರಾಜು ಗುಡಗೇರಿ, ಎಸ್.ಎಸ್. ತಾರಿಕೊಪ್ಪ, ಪದ್ಮನಗೌಡ ಪಾಟೀಲ, ಫಕ್ಕೀರಪ್ಪ ಕುಸಲಾಪುರ, ನಾಗನಗೌಡ ಪಾಟೀಲ, ಮಂಜುನಾಥಗೌಡ ಸಂದಿಗವಾಡ, ಮಹಾಂತೇಶ ಉಮಚಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-23-137340837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.