ಲಕ್ಷ್ಮೇಶ್ವರ: ಈ ವರ್ಷದ ಬಿರು ಬಿಸಿಲು ಒಂದೆಡೆ ಜನರ ನೆತ್ತಿಯನ್ನು ಸುಡುತ್ತಿದ್ದು ಮತ್ತೊಂದೆಡೆ ನೀರಿನ ಪ್ರಮುಖ ನೆಲೆಗಳಾಗಿರುವ ಕೆರೆಗಳಲ್ಲಿನ ಅಲ್ಪಸ್ವಲ್ಪ ನೀರನ್ನು ಆವಿಯಾಗಿಸಿ ಖಾಲಿ ಮಾಡುತ್ತಿದೆ. ಇದರಿಂದಾಗಿ ಜನ ಮತ್ತು ಜಾನುವಾರುಗಳು ಬಿಸಿಲ ಬೇಗೆಗೆ ಕಂಗೆಟ್ಟಿದ್ದಾರೆ. ಪ್ರತಿದಿನ ತಾಲ್ಲೂಕಿನಲ್ಲಿ 37ರಿಂದ 38 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು ಸುಡುವ ಬಿಸಿಲಿಗೆ ಜನರು ತತ್ತರಿಸಿದ್ದಾರೆ.

ಬಿಸಿಲಿನಿಂದ ಜನರಷ್ಟೆ ಅಲ್ಲ, ಜಾನುವಾರುಗಳೂ ಕೂಡ ನಲುಗುತ್ತಿವೆ. ಈವರೆಗೂ ಮಳೆ ಆಗದ ಕಾರಣ ತಾಲ್ಲೂಕಿನ ಎಲ್ಲ ಕೆರೆಗಳ ಒಡಲು ಖಾಲಿಯಾಗಿ ಬಣಗುಡುತ್ತಿವೆ. ವಿಶೇಷವಾಗಿ ಲಕ್ಷ್ಮೇಶ್ವರದ ಪುರಾತನ ಇಟ್ಟಿಗೇರಿ, ಕೆಂಪಿಗೇರಿ ಮತ್ತು ಮೋಟಾರ್ಗಟ್ಟಿ ಕೆರೆಗಳು ನೀರಿಲ್ಲದೆ ಒಣಗಿ ನಿಂತಿವೆ. ಅದರಂತೆ ತಾಲ್ಲೂಕಿನ ಬಸಾಪುರದ ದೊಡ್ಡ ಕೆರೆಯಂತೂ ಸಂಪೂರ್ಣ ಒಣಗಿದ್ದು ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಇನ್ನು ತಾಲ್ಲೂಕಿನ ಬಾಲೆಹೊಸೂರಿನ ಎರಡು ಹೊಸ ಕೆರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದ್ದರೆ, ಜೋಕುಮಾರನ ಕೆರೆ ಪೂರ್ಣ ಒಣಗಿದೆ. ಹಾಗೆಯೇ ಸೂರಣಗಿ, ದೊಡ್ಡೂರು, ಶಿಗ್ಲಿ, ಗೋವನಾಳ, ರಾಮಗೇರಿ, ಅಡರಕಟ್ಟಿ ಗ್ರಾಮಗಳಲ್ಲಿನ ಕೆರೆಗಳಲ್ಲಿ ಸ್ವಲ್ಪ ನೀರಿದ್ದು ಅದೂ ಸುಡು ಬಿಸಿಲಿಗೆ ಆವಿಯಾಗುವ ಭಯ ಜನರನ್ನು ಕಾಡುತ್ತಿದೆ.

ಜಾನುವಾರುಗಳಿಗೆ ನೀರಿನ ಸಮಸ್ಯೆ: ಕೃಷಿ ಆಧಾರಿತ ಬಸಾಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಡು, ಕುರಿ, ಆಕಳು, ಎಮ್ಮೆ, ಎತ್ತುಗಳು ಇದ್ದು ಅವುಗಳಿಗೆ ನೀರು ಕುಡಿಸಲು ರೈತರು ಪರದಾಡುವ ಪರಿಸ್ಥಿತಿ ತಲೆದೋರಿದೆ. ಪ್ರತಿವರ್ಷ ಕೆರೆಯಲ್ಲಿ ಸ್ವಲ್ಪಾದರೂ ನೀರು ಇರುತ್ತಿತ್ತು. ಆದರೆ ಈ ವರ್ಷ ಸಂಪೂರ್ಣ ಖಾಲಿ ಆಗಿರುವುದು ಸಮಸ್ಯೆ ತಲೆದೋರಿದೆ. ಹಾಗೆಯೇ ತಾಲ್ಲೂಕಿನ ಕೆರೆಗಳು ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿಗೆ ಒಣಗುವ ಹಂತಕ್ಕೆ ಬರುತ್ತಿರುವುದು ರೈತರಲ್ಲಿ ಚಿಂತೆ ಮೂಡಿಸಿದೆ.

ಜಾನುವಾರುಗಳಿಗೆ ರೈತರು ಹೇಗೋ ನೀರನ್ನು ಹೊಂದಿಸುತ್ತಾರೆ. ಆದರೆ ಕಾಡುಮೇಡುಗಳಲ್ಲಿ ಅಲೆಯುವ ಕುರಿಗಳಿಗೆ ನೀರು ಸಿಗದ ಪರಿಸ್ಥಿತಿ ಇದೆ. ಇದರಿಂದಾಗಿ ಕುರಿಗಾಹಿಗಳು ಅಕ್ಷರಶಃ ಕಂಗೆಟ್ಟಿದ್ದಾರೆ. ನೆತ್ತಿ ಸುಡುವ ಬಿಸಿಲಿನಲ್ಲಿ ನೂರಾರು ಕುರಿಗಳೊಂದಿಗೆ ತಿರುಗಾಡುವ ಕುರಿಗಾಹಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಬೇಗನೇ ಮಳೆ ಆಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

‘ಊರಿನ ಕೆರೆಗಳಲ್ಲಿ ಕುರಿಗಳಿಗೆ ಕುಡಿಸಲು ನೀರಿಲ್ಲ. ಬಿಸಿಲ ನೋಡಿದರ ಭಾಳ ಐತಿ. ಮುಂದ ಹ್ಯಂಗಪಾ ಅನ್ನ ಚಿಂತಿ ಶುರುವಾಗೇತ್ರೀ’ ಎಂದು ಲಕ್ಷ್ಮೇಶ್ವರದ ಕುರಿಗಾಹಿ ಹನಮಂತಪ್ಪ ಶೆರಸೂರಿ ಚಿಂತೆ ವ್ಯಕ್ತಪಡಿಸಿದರು.

‘ಬೇಗನೇ ಮಳೆ ಆಗದಿದ್ದರೆ ಸದ್ಯ ಕೆರೆಗಳಲ್ಲಿ ಇರುವ ನೀರು ಬತ್ತಿ ಹೋಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ’ ಎಂದು ತಾಲ್ಲೂಕಿನ ರಾಮಗೇರಿ ಗ್ರಾಮದ ರೈತ ಮುಖಂಡ ಬಸಣ್ಣ ಬೆಟಗೇರಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-23-11543064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.