ಲಕ್ಷ್ಮೇಶ್ವರ: ಇಲ್ಲಿನ ಮ್ಯಾಗೇರಿ ಓಣಿಯಲ್ಲಿನ ಬೀರೇಶ್ವರ ದೇವಸ್ಥಾನದಲ್ಲಿ ಹಾಲುಮತ ಸಮಾಜದ ವತಿಯಿಂದ ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ಕತ್ರಿಗಾರ ಹಬ್ಬ ಮೇ14ರಂದು ಜರುಗಲಿದೆ. ಹಬ್ಬದ ನಿಮಿತ್ತ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಬರುವ ಜನರಿಗಾಗಿ ಊಟ ಸೇರಿದಂತೆ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ.

ಕತ್ರಿಗಾರ ಹಬ್ಬದಾಚರಣೆ ಕುರಿತು ಹಿರಿಯ ಮುಖಂಡ ಬಸವರಾಜ ಗುಡಗುಂಟಿ ಮಾತನಾಡಿ, ‘ಪ್ರತಿವರ್ಷ ನಮ್ಮ ಮ್ಯಾಗೇರಿ ಓಣಿಯ ಬೀರೇಶ್ವರ ದೇವಸ್ಥಾನದಲ್ಲಿ ಕತ್ರಿಗಾರ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಅದರಂತೆ ಈ ವರ್ಷವೂ ಕೂಡ 7 ಜೋಡಿ ಸಾಮೂಹಿಕ ವಿವಾಹದೊಂದಿಗೆ ಹಬ್ಬ ನಡೆಯಲಿದೆ. ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಆಶೀರ್ವದಿಸಬೇಕು’ ಎಂದು ಅವರು ತಿಳಿಸಿದರು.

ಈ ವರ್ಷ ಹಬ್ಬಕ್ಕೆ ಬರುತ್ತಿರುವ ಎಲ್ಲರಿಗೂ ಬೋಂದೆ ಊಟ ಬಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಅದನ್ನು ತಯಾರಿಸುವ ಕೆಲಸ ಭರದಿಂದ ನಡೆದಿದೆ ಎಂದರು. ಈ ಸಮಯದಲ್ಲಿ ಮ್ಯಾಗೇರಿ ಓಣಿಯ ಎಲ್ಲಾ ಗುರು ಹಿರಿಯರು ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-23-1867073902

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.