ಲಕ್ಷ್ಮೇಶ್ವರ: ಪ್ರತಿವರ್ಷ ನಡೆಯುವ ಜಾತ್ರೆಗೂ ಮುನ್ನ ಶಿರಹಟ್ಟಿ ಸಂಸ್ಥಾನಮಠದ ಫಕ್ಕೀರ ಸಿದ್ಧರಾಮ ಸ್ವಾಮೀಜಿ ಭಿಕ್ಷಾಟನೆ ನಡೆಸುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಬಡವ ಶ್ರೀಮಂತ ಎನ್ನದೇ ಎಲ್ಲರ ಮನೆ ಮನೆಗಳಿಗೆ ತೆರಳಿ ಭಕ್ತರು ಕೊಟ್ಟಷ್ಟು ಹಣ ಹಾಗೂ ದವಸ ಧಾನ್ಯಗಳನ್ನು ಸ್ವೀಕರಿಸುತ್ತಾರೆ. ಅದರಂತೆ ಈ ವರ್ಷ ಕೂಡ ಭಿಕ್ಷಾಟನೆ ಕಾರ್ಯದಲ್ಲಿ ತೊಡಗಿದ್ದು ಬುಧವಾರ ಮತ್ತು ಗುರುವಾರ ಲಕ್ಷ್ಮೇಶ್ವರ ತಾಲ್ಲೂಕಿನ ಯತ್ತಿನಹಳ್ಳಿ ಅವರು ಗ್ರಾಮದಲ್ಲಿ ಸಂಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಮಠದ ಸಂಪ್ರದಾಯದಂತೆ ಹಿಂದಿನಿಂದಲೂ ಭಿಕ್ಷಾಟನೆ ನಡೆಸುವುದು ವಾಡಿಕೆ. ಸಮಾಜದಲ್ಲಿನ ಬಡವ, ಸಿರಿವಂತ ಹಾಗೂ ಜಾತಿ, ಮತ, ಪಂಥ ನೋಡದೆ ಎಲ್ಲರಿಂದ ಭಿಕ್ಷೆ ಸ್ವೀಕರಿಸುವುದು ನಮ್ಮ ಮಠದ ಸಂಪ್ರದಾಯ. ಅಂದರೆ ಎಲ್ಲರೂ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಭಿಕ್ಷಾಟನೆ ಹಿಂದಿರುವ ಉದ್ಧೇಶ’ ಎಂದು ತಿಳಿಸಿದ ಅವರು ‘ಜಾತ್ರೆ, ಉತ್ಸವಗಳು ಸಮಾಜದಲ್ಲಿ ಸಾಮರಸ್ಯ ಮುಡಿಸುವಲ್ಲಿ ಸಹಕಾರಿ ಆಗಿವೆ. ಹೀಗಾಗಿ ಸಣ್ಣಪುಟ್ಟು ಊರು ಸೇರಿದಂತೆ ಎಲ್ಲ ಪಟ್ಟಣ, ನಗರಗಳಲ್ಲೂ ಇವು ನಡೆಯುತ್ತವೆ’ ಎಂದು ಹೇಳಿದ ಅವರು ‘ಎಲ್ಲರೂ ಜಾತ್ರೆಗೆ ಬರಬೇಕು ಎಂದು’ ಮನವಿ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-23-503888971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.